ರಾಯಚೂರು: ಇವರು ಎಂಎಲ್ಎ ಅಲ್ಲ, ಎಂಎಲ್ ಸಿ ಕೂಡ ಅಲ್ಲ. ಆದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂಬ ಕಾರಣಕ್ಕೆ ಸಚಿವ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ನಡಿನ್‌ಲ್ಲಿ ಸುಭಾಷ್‌ಚಂದ್ರ ಬೋಸ್‌ರಾಜು (ಎನ್.ಎಸ್.ಬೋಸರಾಜು ) ರಾಜ್ಯದ ಕಾಂಗ್ರೆಸ್ ನಲ್ಲಿ ತಮ್ಮದೇಯಾದ ಹೆಗ್ಗುರತು ಉಳಿಸಿಕೊಂಡ ವ್ಯಕ್ತಿ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದು ರಾಜಕೀಯದ ಮತ್ತೊಂದು ಮೆಟ್ಡಿಲು ಹತ್ತಿದ್ದಾರೆ. ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಮೊಗಲೂರು ಪಶ್ಚಿಮ ಗ್ರಾಮದವರಾದ ಎನ್.ಎಸ್.ಬೋಸ್‌ರಾಜ್ ರಾಜು ಕ್ಷತ್ರಿಯ ಸಮುದಾಯಕ್ಕೆ ಸೇರಿದ್ದಾರೆ. ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆಯನ್ನು ಬೃಹತ್ ಪ್ರಮಾಣದ ಉದ್ಯಮವಾಗಿಸುವ ಮೂಲಕ ಎನ್.ಎಸ್. ಬೋಸರಾಜ್ ರಾಜಕೀಯ ಪ್ರವೇಶ ಮಾಡಿದರು.
ಯುವ ಘಟಕದ ರಾಜಕಾರದಿಂದ ಹಂತ ಹಂತವಾಗಿ ಬೆಳೆದು ಬಂದ ಅವರು, ಮಾನ್ವಿ ಕ್ಷೇತ್ರದಿಂದ ಮೊದಲ ಬಾರಿ ಸೋಲುಂಡಿದ್ದ ಅವರು, ನಂತರ ಎರಡು ಬಾರಿ ಶಾಕಸರಾಗಿ ಆಯ್ಕೆಯಾಗಿದ್ದರು. ಮಾನ್ವಿ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕಾರಣ ಅವರು ರಾಯಚೂರು ನಗರ ಕ್ಷೇತ್ರದತ್ತ ಮುಖ ಮಾಡಿದರು. ಕಳೆದ ಟಿಕೆಟ್ ಸಿಗದ ಕಾರಣಕ್ಕೆ ಎಂಎಲ್ ಸಿ ಸ್ಥಾನಕ್ಕೆ ಆಯ್ಕೆಯಾದರು.
ಈ ಬಾರಿ ರಾಯಚೂರು ನಗರ ಕ್ಷೇತ್ರದ ಟಿಕೆಟ್ ಗಾಗಿ ಸಾಕಷ್ಟು ಪ್ರಬಲ ಪೈಪೋಟಿ ನೀಡಿದ್ದರು. ಆದರೆ, ಇಲ್ಲಿ ಅಲ್ಪಸಂಖ್ಯಾತರಿಗೆ ನೀಡಬೇಕು ಎನ್ನುವ ಕಾರಣಕ್ಕೆ ಬೋಸರಾಜು ಅವರಿಗೆ ಟಿಕೆಟ್ ನೀಡಲಿಲ್ಲ. ಈ ವಿಚಾರದಲ್ಲಿ ಖುದ್ದು ರಾಹುಲ್ ಗಾಂಧಿಯವರೇ ಇವರ ಜತೆ ಚರ್ಚಿಸಿದ್ದರು. ನೀವು ಹೇಳಿದವರಿಗೆ ಟಿಕೆಟ್ ನೀಡಲಾಗುವುದು. ನಿಮಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ತಿಳಿಸಲಾಗಿತ್ತು ಎಂದು ತಿಳಿದು ಬಂದಿದೆ. ಹೈಕಮಾಂಡ್ ಕೊಟ್ಟ ಮಾತಿನಂತೆ ಬೋಸರಾಜ್ ಅವರಿಗೆ ಸಚಿವ ಸ್ಥಾನ ನೀಡಿದೆ.