Advertisement

ಕೋವಿಡ್ ನಿರ್ವಹಣೆಗೆ ಎನ್. ಮಂಜುನಾಥ್ ಪ್ರಸಾದ್ ನಿಯೋಜನೆ : ಸರ್ಕಾರ ಆದೇಶ

10:25 PM Apr 27, 2021 | Team Udayavani |

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಪರಿಸ್ಥಿತಿ ಕೈಮೀರಿರುವ ಹಿನ್ನೆೆಲೆಯಲ್ಲಿ ಪಾಲಿಕೆಯ ನಿಕಟಪೂರ್ವ ಆಯುಕ್ತ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅವರನ್ನು ಕೋವಿಡ್ ನಿರ್ವಹಣೆಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್‌ಗುಪ್ತ ಅವರಿಗೆ ನೆರವು ನೀಡಲು ನಿಯೋಜಿಸಿ ಸರ್ಕಾರ ಆದೇಶ ಮಾಡಿದೆ.

Advertisement

ಎನ್. ಮಂಜುನಾಥ್ ಪ್ರಸಾದ್ ಅವರು ಹಾಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕರ್ತವ್ಯದ ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸಂಬಂಧಿತ ಕರ್ತವ್ಯಗಳ ನಿರ್ವಹಣೆಗೆ ನಿಯೋಜಿಸಲಾಗಿದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖ ಮಾಡಿದೆ.

ನಗರದಲ್ಲಿ ಈ ಹಿಂದೆ ಕೊರೊನಾ ಮೊದಲ ಅಲೆ ನಿಭಾಯಿಸುವಲ್ಲಿ ಪಾಲಿಕೆ ವಿಫಲವಾದ ಸಂದರ್ಭದಲ್ಲೂ ಸಹ ಪಾಲಿಕೆಯ ಆಯುಕ್ತರನ್ನಾಗಿ ಮಂಜುನಾಥ್ ಪ್ರಸಾದ್ ಅವರನ್ನು ನಿಯೋಜಿಸಲಾಗಿತ್ತು. ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುವಂತೆ ಮಾಡುವಲ್ಲಿ ಮಂಜುನಾಥ್ ಪ್ರಸಾದ್ ಅವರು ಯಶಸ್ವಿ ಆಗಿದ್ದರು.

ಇದನ್ನೂ ಓದಿ :ಸೋಂಕು ಪರೀಕ್ಷಾ ವರದಿ 24 ಗಂಟೆಯ ಒಳಗೆ ಕೊಡಬೇಕು : ಗೌರವ್‌ಗುಪ್ತ

Advertisement

Udayavani is now on Telegram. Click here to join our channel and stay updated with the latest news.

Next