Advertisement

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

03:39 AM Jan 07, 2025 | Team Udayavani |

ಮೈಸೂರು: ಒಂಟಿಕೊಪ್ಪಲಿನ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ರಾಯಲ್‌ ಇನ್‌ ಜಂಕ್ಷನ್‌ ವರೆಗಿನ ರಸ್ತೆಗೆ ಅಧಿಕೃತವಾಗಿ ಯಾವುದೇ ಹೆಸರು ಇಲ್ಲ. ಆದ್ದರಿಂದ ಆ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ನಾಮಕರಣ ಮಾಡುತ್ತೇವೆ ಎಂದು ಪಾಲಿಕೆಗೆ ಮನವಿ ಮಾಡಿದ್ದೇವೆಯೇ ಹೊರತು, ರಾಜ ಮನೆತನದವರ ಹೆಸರು ಬದಲಾಯಿಸಬೇಕು ಎನ್ನುವ ಉದ್ದೇಶ ಇಲ್ಲ ಎಂದು ಶಾಸಕ ಕೆ. ಹರೀಶ್‌ ಗೌಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಜೆಎಲ್‌ ಬಿ ರಸ್ತೆಯ ದಾಸಪ್ಪ ಸರ್ಕಲ್‌ನಿಂದ ಒಂಟಿಕೊಪ್ಪಲು ದೇವಸ್ಥಾನದ ಬಳಿ ಇರುವ ಚಿಕ್ಕಣ್ಣ ದಾಸ ಸರ್ಕಲ್‌ ವರೆಗೂ ಪ್ರಿನ್ಸೆಸ್‌ ರಸ್ತೆ ಎಂಬ ಹೆಸರು ದಾಖಲೆಗಳಲ್ಲಿ ಇದೆ. ಆದರೆ ಒಂಟಿಕೊಪ್ಪಲ್‌ ದೇವಸ್ಥಾನದಿಂದ ಮುಂದಕ್ಕೆ ಯಾವ ಹೆಸರೂ ಅಧಿಕೃತವಾಗಿ ಇಲ್ಲ. ರೂಢಿಗತವಾಗಿ ಕೆಆರ್‌ಎಸ್‌ ರಸ್ತೆ ಎಂದು ಕರೆಯುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next