ಮೈಸೂರು: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಸಾಂಸ್ಕೃತಿಕ ನಗರಿ ಮೈಸೂರಿನ ಹೋಟೆಲ್ ರ್ಯಾಡಿಸನ್ ಬ್ಲೂನಲ್ಲಿ ತಂಗಲಿದ್ದು, ಅವರಿಗಾಗಿ ಮೈಸೂರು ಶೈಲಿಯ ಭೋಜನ ಸಿದ್ದಪಡಿಸಲಾಗಿದೆ.
ಶುದ್ಧ ಸಸ್ಯಹಾರಿ ಊಟ ತಯಾರಿಸಲಾಗಿದ್ದು, ಈಗಾಗಲೇ ಮಿತವಾದ ಸಕ್ಕರೆ ಹಾಗೂ ಕಡಿಮೆ ಮಸಾಲೆ ಅಂಶವಿರುವ ಊಟ ತಯಾರು ಮಾಡಲು ಸೂಚನೆ ನೀಡಲಾಗಿದೆ. ಮೈಸೂರು ಶೈಲಿಯ ವೆಜಿಟೇಬಲ್ ಸೂಪ್, ಮಸಾಲ ಮಜ್ಜಿಗೆ, ರೋಟಿ, ಜೀರಾ ರೈಸ್, ದಾಲ್ ಹಾಗೂ ಮಿಕ್ಸ್ ಫ್ರೂಟ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದಲ್ಲದೆ ನರೇಂದ್ರ ಮೋದಿ ಅವರು ಇಷ್ಟ ಪಟ್ಟರೆ ಪರ್ಯಾಯವಾಗಿ ಮತ್ತೊಂದು ಮೆನು ರೆಡಿ ಮಾಡಲಾಗಿದ್ದು, ಗುಜರಾತಿ ಕರಿ, ರೋಟಿ, ಕಿಚಡಿ, ಎರಡು ಬಗೆಯ ಸಬ್ಜಿ, ದಾಲ್, ರೈಸ್ ಹಾಗೂ ಮಿಕ್ಸ್ ಫ್ರೂಟ್ ಕೂಡ ತಯಾರಿಸಲಾಗಿದೆ.
ಇದನ್ನೂ ಓದಿ : ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ; 40 ವರ್ಷ ಬೇಕಾಯಿತು; ವಿಪಕ್ಷಗಳತ್ತ ಚಾಟಿ
ಮೈಸೂರು ಅರಮನೆಯಲ್ಲಿ ಪ್ರಧಾನಿ ಅವರು ಮಂಗಳವಾರ ಬೆಳಗ್ಗೆ ಮೈಸೂರು ರಾಜವಂಶಸ್ಥರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ. ಇಡ್ಲಿ- ಸಾಂಬಾರ್, ಬ್ರೆಡ್ ಬಟರ್, ಮಿಕ್ಸ್ ಫ್ರಂಟ್, ಅವಲಕ್ಕಿ ಹಾಗೂ ಉಪ್ಪಿಟ್ಟಿನ ಸವಿಯನ್ನು ಉಣಬಡಿಸಲಾಗುವುದು.ಮೈಸೂರಿನ ಬ್ರ್ಯಾಂಡ್ ಮೈಸೂರು ಪಾಕನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಉದ್ಘಾಟಿಸಲಿರುವ ಜೆ ಎಸ್ ಎಸ್ ಮಹಾವಿದ್ಯಾಪೀಠದ ಕೆ ಎಸ್ ಎಸ್ ಸಂಸ್ಕೃತ ಪಾಠಶಾಲೆಯ ನೂತನ ಕಟ್ಟಡ