Advertisement
ಶಿರ್ವ ಮೂಲದ ಮೈಸೂರು ಕುವೆಂಪು ನಗರ ನಿವಾಸಿ ಅಭಿಷೇಕ್ (25), ಮೈಸೂರಿನ ವಿದ್ಯಾವಿಕಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ, ಬಳಿಕ ಸ್ನಾತಕೋತ್ತರ ಅಧ್ಯಯನಕ್ಕಾಗಿ ಒಂದೂವರೆ ವರ್ಷದ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ವಾರಾಂತ್ಯದಲ್ಲಿ ಅಭಿಷೇಕ್, ಕ್ಯಾಲಿಫೋರ್ನಿಯಾದ ಸನ್ ಬೆರ್ನಾರ್ಡಿನೋ ಹೋಟೆಲ್‌ನಲ್ಲಿ ಸಂಪಾದನೆಗಾಗಿ ರಿಸೆಪ್ಷನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಉಳಿದುಕೊಂಡಿದ್ದ ಗ್ರಾಹಕನೊಬ್ಬ ರೂಮ್‌ನ್ನು ಖಾಲಿ ಮಾಡಬೇಕಿತ್ತು. ಈತ ಮಾಡದೆ ಇದ್ದಾಗ ಅಭಿಷೇಕ್ ಕೇಳಿದ್ದಕ್ಕೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಸ ಮುಗಿಸಿದ ಬಳಿಕ ಅಭಿಷೇಕ್ ಹೊರಬರುವಾಗ ಗ್ರಾಹಕ ಹಣೆಗೆ ರಿವಾಲ್ವರ್‌ನಿಂದ ಗುಂಡಿಟ್ಟು ಹತ್ಯೆ ಮಾಡಿದ ಎನ್ನಲಾಗಿದೆ. ಸಿಸಿಟಿವಿಯಲ್ಲಿ ಘಟನೆ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
Advertisement
ಅಮೆರಿಕದಲ್ಲಿ ಶಿರ್ವ ಮೂಲದ ಯುವಕನಿಗೆ ಗುಂಡಿಟ್ಟು ಹತ್ಯೆ
09:48 AM Nov 30, 2019 | Sriram |