Advertisement

Mysuru; ನಾಳೆ ಪೇಜಾವರ ಶ್ರೀಗಳ ಚಾತುರ್ಮಾಸ್ಯ ಪ್ರಯುಕ್ತ ಸಂತ ಸಮಾವೇಶ

10:02 PM Sep 09, 2023 | Team Udayavani |

ಮೈಸೂರು: ನಗರದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಸ್ವಾಮೀಜಿಯವರ ಆಶ್ರಯದಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯದ ಅಂಗವಾಗಿ ಸೆ 10 ಭಾನುವಾರ ಸಂತ ಸಮಾವೇಶ ಮತ್ತು ಬೃಹತ್ ಧರ್ಮಸಭೆಯನ್ನು ಆಯೋಜಿಸಲಾಗಿದೆ .

Advertisement

ಪೇಜಾವರ ಶ್ರೀಗಳ ಚಾತುರ್ಮಾಸ್ಯ ವ್ರತ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲಾ ಘಟಕಗಳ ಜಂಟಿ ಸಂಯೋಜನೆಯಲ್ಲಿ ಈ ಸಮಾವೇಶ ನಡೆಯಲಿದೆ .

ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರು , ಸಾಧು ಸಂತರು ಭಾಗವಹಿಸಲಿದ್ದಾರೆ. ಬೆಳಗ್ಗೆ 10 ರಿಂದ 11.30 ರ ವರೆಗೆ ಸಂತ ಸಮಾವೇಶದಲ್ಲಿ ಹಿಂದೂ ಸಮಾಜದ ಪ್ರಚಲಿತ ವಿದ್ಯಮಾನಗಳ ಕುರಿತು ಮಠಾಧೀಶರು ಮಂಥನ ನಡೆಸಲಿದ್ದು,ಸಾರ್ವಜನಿಕರು ಭಾಗವಹಿಸಲು ಅವಕಾಶ ಇರುವುದಿಲ್ಲ.

ರಾಜಕಾರಣಿಗಳಿಂದ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಗಳು, ಗೋಹತ್ಯಾನಿಷೇಧ ಆಂದೋಲನ , ಜಾತಿಯ ಹೋರಾಟಗಳಷ್ಟೇ ಧರ್ಮದ ಪರವಾಗಿಯೂ ಮಠಾಧೀಶರು ಸಂದರ್ಭಾನುಸಾರ ಧ್ವನಿ ಎತ್ತಬೇಕಾದ ಅವಶ್ಯಕತೆ , ಹಿಂದು ದೇವಳಗಳ ಸುರಕ್ಷತೆ , ಲವ್ ಜಿಹಾದ್ , ಲ್ಯಾಂಡ್ ಜಿಹಾದ್ , ಜಾತ್ರಾ ಜಿಹಾದ್ ಮೊದಲಾದವುಗಳು ಮತ್ತು ಹಿಂದೂ ಭಾವನೆಗಳ ಮೇಲಾಗುತ್ತಿರುವ ಅನೇಕ ರೀತಿಯ ಹಾನಿಗಳ ತಡೆ ಮೊದಲಾದ ಅನೇಕ ವಿಷಯಗಳನ್ನು ಚರ್ಚಿಸುವ ಸಾಧ್ಯತೆ ಇದೆ.

ನಂತರ ಬೃಹತ್ ಹಿಂದೂ ಧರ್ಮಸಭೆ ನಡೆಯಲಿದ್ದು ಇದರಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ . ಪೇಜಾವರ ಶ್ರೀಗಳು ಅಧ್ಯಕ್ಷತೆ ವಹಿಸಲಿದ್ದು ಮಂಗಳೂರು ಗುರುಪುರ ಶ್ರೀ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಹಿತ ಕೆಲವು ಮಠಾಧೀಶರು ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕ್ರಮವು ಗಣಪತಿ ಸಚ್ಚಿದಾನಂದಾಶ್ರಮದ ಸಭಾಂಗಣದಲ್ಲಿ ನಡೆಯಲಿದೆ .

Advertisement

ಧರ್ಮಸಭೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿಶ್ವಹಿಂದೂ ಪರಿಷತ್ ಮತ್ತು ಚಾತುರ್ಮಾಸ್ಯ ಸಮಿತಿ ಕರೆ ನೀಡಿದೆ

Advertisement

Udayavani is now on Telegram. Click here to join our channel and stay updated with the latest news.

Next