Advertisement

Mysuru Dasara: ಎರಡನೇ ತಂಡದ ಗಜಪಡೆಗೆ ತೂಕ ಪರೀಕ್ಷೆ: ಸುಗ್ರೀವ 5.2 ಟನ್‌

01:12 AM Sep 07, 2024 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ನಗರಕ್ಕಾಗಮಿಸಿರುವ 2ನೇ ತಂಡದ ಗಜಪಡೆಗೆ ಶುಕ್ರವಾರ ತೂಕ ಪರೀಕ್ಷೆ ನಡೆಸಲಾಯಿತು. ಮೊದಲ ತಂಡದ 9 ಆನೆಗಳಿಗೆ ನಡೆಸಲಾದ ತೂಕದಲ್ಲಿ ಕ್ಯಾಪ್ಟನ್‌ ಅಭಿಮನ್ಯು ನಂ. 1 ಆಗಿದ್ದರೆ, 2ನೇ ತಂಡದಲ್ಲಿ ಸುಗ್ರೀವ ಬಲಶಾಲಿ ಎನಿಸಿಕೊಂಡಿದ್ದಾನೆ.

Advertisement

2ನೇ ತಂಡದ ಐದು ಆನೆಗಳು ಗಜಪಡೆಯ ಸಾರಥಿ ಅಭಿಮನ್ಯು ತಂಡಕ್ಕೆ ಸಾಥ್‌ ನೀಡಿವೆ. ತೂಕ ಪರೀಕ್ಷೆಯಲ್ಲಿ ಸುಗ್ರೀವ 5,190 ಕೆ.ಜಿ., ಮಹೇಂದ್ರ 4,910 ಕೆ.ಜಿ., ಪ್ರಶಾಂತ 4,875, ಕೆ.ಜಿ., ಹೆಣ್ಣಾನೆಗಳಾದ ದೊಡ್ಡ ಹರವೆ ಲಕ್ಷ್ಮೀ 3,485, ಹಿರಣ್ಯ 2,930 ಕೆ.ಜಿ. ತೂಕ ಹೊಂದಿವೆ. ಮೊದಲ ಹಂತದ ಆನೆಗಳಿಗೆ ಈಗಾಗಲೇ ಭಾರ ಹೊರುವ ತಾಲೀಮು ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next