Advertisement
ಮೈಸೂರು ಮಹಾನಗರ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಪಿ.ಲಿಂಗರಾಜು, ಹೋಟೆಲ್ ಉದ್ದಿಮೆಗಳ ಸಂಘದ ಅಧ್ಯಕ್ಷ ನಾರಾ ಯಣಗೌಡ, ಮಾಜಿ ಮೇಯರ್‌ಗಳಾದ ಸಂದೇಶ್ ಸ್ವಾಮಿ, ಲಿಂಗಪ್ಪ ಪಾಲ್ಗೊಂಡು ಅಭಿಪ್ರಾಯಗಳನ್ನು ತಿಳಿಸಿದರು.
Related Articles
Advertisement
ವ್ಯಾಪಾರಸ್ಥರಿಗೆ ಮಳಿಗೆಗಳನ್ನು ನೀಡಬೇಕು: ಮಾಜಿ ಮೇಯರ್ ಕೆ.ಆರ್.ಲಿಂಗಪ್ಪ ಮಾತನಾಡಿ, ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಚಟುವಟಿಕೆ ಸ್ಥಗಿತಗೊಳಿಸಿ ಬಹಳಷ್ಟು ವರ್ಷವೇ ಆಗಿದೆ. ಪಾಲಿಕೆಯು ಅಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ಅಥವಾ ಇರುವ ಕಟ್ಟಡವನ್ನೇ ಪುನರುಜ್ಜೀವನಗೊಳಿಸಿ ವ್ಯಾಪಾರಸ್ಥ ರಿಗೆ ಬಾಡಿಗೆಗೆ ನೀಡಿದ್ದರೆ ಆದಾಯ ಬರುತ್ತಿತ್ತು. ಇದೇ ರೀತಿ ದೇವರಾಜ ಮಾರುಕಟ್ಟೆಯನ್ನು ಕೂಡಾ ಒಂದೇ ಸಲ ನೆಲಸಮ ಮಾಡದೇ ಅರ್ಧ ಭಾಗ ಕೆಡವಿ, ಅಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ನೀಡ ಬೇಕು. ಬಳಿಕ ಇನ್ನರ್ಧ ಭಾಗದಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಇದರಿಂದ ವ್ಯಾಪಾರಸ್ಥರಿಗೂ ತೊಂದರೆಯಾಗುವು ದಿಲ್ಲ ಎಂದು ಸಲಹೆ ನೀಡಿದರು.
ಪೇ ಅಂಡ್ ಪಾರ್ಕಿಂಗ್ ಜಾರಿಗೊಳಿಸಿ: ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೆ.ಪಿ. ಲಿಂಗರಾಜು ಮಾತನಾಡಿ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಟ್ರೇಡ್ ಲೈಸನ್ಸ್ ಸೆಕ್ಟರ್ ನಿಂದ ಮುಕ್ತಗೊಳಿಸಬೇಕು. ಡಿ.ದೇವರಾಜ ಅರಸ್ ರಸ್ತೆ, ಅಶೋಕ ರಸ್ತೆ, ಸಯ್ನಾಜಿರಾವ್ ರಸ್ತೆಯಲ್ಲಿ ಪೇ ಅಂಡ್ ಪಾರ್ಕಿಂಗ್’ ಜಾರಿಗೊಳಿಸ ಬೇಕು. ಬಹುಮಹಡಿ ಪಾರ್ಕಿಂಗ್ ಅನುಷ್ಠಾನ ಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ, ಹೆಚ್ಚುವರಿ ಆಯುಕ್ತರಾದ ರೂಪ, ಸವಿತಾ, ಪಾಲಿಕೆ ಸದಸ್ಯರಾದ ಅಶ್ವಿನಿ ಅನಂತ್, ಸತ್ಯ ರಾಜು, ರಮಣಿ, ಎಸ್ಪಿಎಂ ಮಂಜು, ಆಯೂಬ್‌ಖಾನ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗ ರಾಜು, ಅಧೀಕ್ಷಕ ಎಂಜಿನಿಯರ್ ಮಹೇಶ್ ಇತರರು ಇದ್ದರು.
ಲೈಸನ್ಸ್ ನೀಡುವ ಪ್ರಕ್ರಿಯೆ ವಿಭಿನ್ನ: ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಟ್ರೇಡ್ ಲೈಸನ್ಸ್ ಪ್ರಕ್ರಿಯೆಯನ್ನು ಸರಳೀಕರಣಗೊಳಿಸ ಬೇಕು. ಲೈಸನ್ಸ್ ಪಡೆದುಕೊಂಡವರಿಗೆ ಸರ್ಟಿಫಿಕೆಟ್ ನೀಡಬೇಕು. ಏಕೆಂದರೆ ಪಾಲಿಕೆ ಯಿಂದ ನೀಡುವ ರಶೀದಿಯನ್ನು ಪ್ರವಾ ಸೋದ್ಯಮ ಇಲಾಖೆ ಸೇರಿದಂತೆ ಹಲವಾರು ಕಡೆಯಲ್ಲಿ ರಿಯಾಯ್ತಿ ಸೌಲಭ್ಯ ನೀಡುವಾಗ ಮಾನ್ಯ ಮಾಡುವುದಿಲ್ಲ. ಅಲ್ಲದೇ ಒಂದೊಂದು ವಲಯದಲ್ಲಿ ಲೈಸನ್ಸ್ ನೀಡುವ ಪ್ರಕ್ರಿಯೆ ವಿಭಿನ್ನವಾಗಿದೆ ಎಂದು ತಿಳಿಸಿದರು