Advertisement

ಮೈಷುಗರ್‌ ಶೀಘ್ರ ಆರಂಭಿಸುವಂತೆ ಒತ್ತಾಯ

05:13 PM Sep 06, 2021 | Team Udayavani |

ಮಂಡ್ಯ: ಮೈಷುಗರ್‌ ಕಾರ್ಖಾನೆ ಆರಂಭ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಮಸ್ಯೆ ನಿವಾರಣೆಹಾಗೂ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆಒತ್ತಾಯಿಸಿ ಸಂಸದೆ ಸುಮಲತಾ ಅಂಬರೀಷ್‌ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದರು.

Advertisement

ಶನಿವಾರ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಹಾಲಪ್ಪ ಆಚಾರ್‌, ಸಕ್ಕರೆ ಸಚಿವ ಶಂಕರ್‌ ಬಿ.ಪಾಟೀಲ್‌ಮುನೇನಕೊಪ್ಪ, ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್‌, ತೋಟಗಾರಿಕೆ ಸಚಿವ ಮುನಿರತ್ನ ಅವರನ್ನುಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಸರ್ಕಾರಿ ನೌಕರರೆಂದು ಪರಿಗಣಿಸಿ: ಅಂಗನವಾಡಿಹಾಗೂ ಆಶಾ ಕಾರ್ಯಕರ್ತೆಯರು ಕೊರೊನಾಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸನಿರ್ವಹಿಸುತ್ತಿದ್ದಾರೆ. ಇವರಿಗೆ ನೀಡುತ್ತಿರುವ ಗೌರವಧನಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಇವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಕನಿಷ್ಠವೇತನ ನಿಗದಿಪಡಿಸುವ ಮೂಲಕ ಮಹಿಳೆಯರಉತ್ತೇಜನಕ್ಕೆ ಒತ್ತು ನೀಡಬೇಕು ಎಂದು ಆರೋಗ್ಯಸಚಿವ ಡಾ.ಕೆ.ಸುಧಾಕರ್‌ ಹಾಗೂ ಸಚಿವ ಹಾಲಪ್ಪಬಸಪ್ಪ ಆಚಾರ್‌ ಅವರಿಗೆ ಮನವಿ ಮಾಡಿದರು.

ಮೈಷುಗರ್‌ ಆರಂಭಕ್ಕೆ ಒತ್ತಾಯ: ಜಿಲ್ಲೆಯಜೀವನಾಡಿಯಾಗಿರುವ ಐತಿಹಾಸಿಕ ಮೈಷುಗರ್‌ಕಾರ್ಖಾನೆಯನ್ನು ಶೀಘ್ರ ಆರಂಭಿಸಬೇಕು. ಕಳೆದಹಲವು ವರ್ಷಗಳಿಂದ ವ್ಯವಸ್ಥಾಪನಾ ಮಂಡಳಿನಿರ್ಲಕ್ಷ್ಯದಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ರೈತರುಸಂಕಷ್ಟಕ್ಕೆ ಸಿಲುಕಿದ್ದಾರೆ.ಅಲ್ಲದೆ, ಕಬ್ಬನ್ನು ನಿರ್ದಿಷ್ಟ ಬೆಲೆಗೆ ಮಾರಾಟಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದಕೂಡಲೇ ಕಾರ್ಖಾನೆ ಆರಂಭಿಸಬೇಕು ಎಂದು ಸಕ್ಕರೆಸಚಿವ ಶಂಕರ್‌ ಬಿ.ಪಾಟೀಲ್‌ ಮುನೇನಕೊಪ್ಪ ಅವರಿಗೆಮನವಿ ಸಲ್ಲಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಆಗ್ರಹ: ಶ್ರೀರಂಗಪಟ್ಟಣ ತಾಲೂಕಿನಲ್ಲಿ ಐತಿಹಾಸಿಕ ಸೇರಿದಂತೆ ಜಿಲ್ಲೆಯಲ್ಲಿಪ್ರವಾಸಿ ತಾಣಗಳಿವೆ. ಆದರೆ ಮೂಲಸೌಕರ್ಯಗಳಿಲ್ಲದೆ, ಪ್ರವಾಸಿಗರಿಗೆತೊಂದರೆಯಾಗುತ್ತಿದೆ. ಆದ್ದರಿಂದ ಜಿಲ್ಲೆಯ ಎಲ್ಲಪ್ರವಾಸಿ ತಾಣಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನುಕಲ್ಪಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕುಎಂದು ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್‌ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಯುವಮುಖಂಡ ಇಂಡುವಾಳು ಎಸ್‌.ಸಚ್ಚಿದಾನಂದ ಹಾಗೂನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next