Advertisement
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ನಗರದಲ್ಲಿ ವೈದ್ಯರನ್ನೇ ದಂಗುಬಡಿಸಿದ ಈ ಘಟನೆ ನಡೆದಿದೆ. ಮೂರ್ಛೆರೋಗ ಹೋಲುವಂತಹ ಸಮಸ್ಯೆಯಿಂದ ನರಳಾಡಿ ಇದುವರೆಗೆ ಒಟ್ಟು 292 ಮಂದಿ ಆಸ್ಪತ್ರೆ ಸೇರಿದ್ದಾರೆ. ಇವರಲ್ಲಿ 46 ಮಕ್ಕಳು ಮತ್ತು 76 ಮಹಿಳೆಯರೂ ಸೇರಿದ್ದಾರೆ.
Related Articles
Advertisement
ರೋಗಿಗಳ ಮೈಯಲ್ಲಿ ವಿಪರೀತ ಸೆಳೆತ, ತಲೆನೋವು, ಬಾಯಲ್ಲಿ ನೊರೆ ಕಂಡುಬಂದಿದೆ. ಕೆಲವರ ಮೂಳೆಗಳ ಕೊಂಡಿ ಕಳಚಿದೆ. ರಕ್ತಪರೀಕ್ಷೆ, ಸಿಟಿ ಸ್ಕ್ಯಾನ್‌ನಲ್ಲಿ ಸಮಸ್ಯೆ ಕಂಡುಬಂದಿಲ್ಲ. ವಿಚಿತ್ರವೆಂದರೆ ಆಸ್ಪತ್ರೆಗೆ ಸೇರಿದವರು ಬೇರೆಬೇರೆ ಪ್ರದೇಶಕ್ಕೆ ಸೇರಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರೆಲ್ಲರಿಗೆ ಸೋಂಕು ಇಲ್ಲವೆಂದು ದೃಢಪಟ್ಟಿದೆ.
ಈ ವಿಚಿತ್ರ ರೋಗಕ್ಕೆ ಕಾರಣವನ್ನು ಕಂಡುಹಿಡಿಯಲು ಆರೋಗ್ಯ ಅಧಿಕಾರಿಗಳು ಪ್ರದೇಶಕ್ಕೆ ಭೇಟಿ ನೀಡಿ ನೀರಿನ ಮಾದರಿಗಳು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಪೀಡಿತ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲೂ ಸ್ಥಳೀಯ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.