Advertisement

Wayanad ಭೂಕುಸಿತ ಪೀಡಿತ ಸ್ಥಳದಲ್ಲಿ ಭೀತಿ ಹುಟ್ಟುಹಾಕಿದ ನಿಗೂಢ ಶಬ್ಧ!!

06:39 PM Aug 09, 2024 | Team Udayavani |

ವಯನಾಡ್ : ಭಾರೀ ಭೂಕುಸಿತ ಸಂಭವಿಸಿ ಅಪಾರ ಪ್ರಾಣ ಹಾನಿ ಸಂಭವಿಸಿರುವ ಕೇರಳದ ವಯನಾಡ್ ನಲ್ಲಿ ಆತಂಕದಲ್ಲಿ ಕಾಲ ಕಳೆಯುತ್ತಿದ್ದ ಜನರನ್ನು ನಿಗೂಢ ಶಬ್ದ ಇನ್ನಷ್ಟು ಭಯಭೀತರನ್ನಾಗಿಸಿದೆ.

Advertisement

ಭೂಕುಸಿತ ಪೀಡಿತ ಎಡಕ್ಕಲ್ ಪ್ರದೇಶದಲ್ಲಿ ವಾಸಿಸುವ ಜನರು ಶುಕ್ರವಾರ ಭೂಮಿಯ ಅಡಿಯಿಂದ ಬರುವ ಶಬ್ದವನ್ನು ಕೇಳಿ ಭಯಗೊಂಡಿದ್ದೇವೆ ಎಂದು ಹೇಳಿದ್ದಾರೆ. ಸ್ಥಳೀಯ ನಿವಾಸಿಗಳು ಸುದ್ದಿಗಾರರೊಂದಿಗೆ ಮಾತನಾಡಿ ಭಾರಿ ಶಬ್ದವನ್ನು ಕೇಳಿದ್ದು, ಸರ್ಕಾರಿ ಅಧಿಕಾರಿಗಳು ಬಂದು ಈ ಕುರಿತು ತನಿಖೆ ಮಾಡಲು ಮನವಿ ಮಾಡಿದ್ದಾರೆ.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಭೂಕಂಪನದ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಏನಾದರೂ ಸಂಭವಿಸಿದೆಯೇ ಎಂದು ಕಂಡುಹಿಡಿಯಲು ಸ್ಥಳೀಯ ವಿಚಕ್ಷಣವನ್ನು ಪ್ರಯತ್ನಿಸುತ್ತಿದ್ದು, ಈಗ ಭೂಕಂಪನದ ಯಾವುದೇ ಸೂಚನೆಗಳು ಕಂಡು ಬಂದಿಲ್ಲ ಎಂದು ತಿಳಿಸಿದೆ.

ಟಿವಿ ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿದ ಪಂಚಾಯತ್ ವಾರ್ಡ್ ಸದಸ್ಯರೊಬ್ಬರು ಹೇಳುವಂತೆ, ಶುಕ್ರವಾರ (ಆಗಸ್ಟ್ ಬೆಳಗ್ಗೆ 10:15 ರ ಸುಮಾರಿಗೆ ಶಬ್ದ ಕೇಳಿಸಿದೆ. ಪೀಡಿತ ಪ್ರದೇಶದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next