ಮೈಸೂರು: ಮೈಸೂರು ರೈಲು ನಿಲ್ದಾಣದಿಂದ ತಮಿಳುನಾಡಿನ ಮನಮಧುರೈಗೆ ವಾರಕ್ಕೊಮ್ಮೆ ಸಂಚಾರ ನಡೆಸುವ ರೈಲಿಗೆ ಮಾ.11ರಂದು ಹಸಿರು ನಿಶಾನೆ ತೋರಿಸಲಾಗುತ್ತದೆ.
ಮೈಸೂರು ರೈಲು ನಿಲ್ದಾಣದಿಂದ ಸಂಜೆ 6.35ಕ್ಕೆ ಹೊರಡುವ ಈ ರೈಲು ಮಾರನೇಯ ದಿನ ಬೆಳಗ್ಗೆ 9.10ಕ್ಕೆ ಮನಮಧುರೈಗೆ ತಲುಪಲಿದೆ. ಇದೇ ರೈಲು ಮಧ್ಯಾಹ್ನ 12ಕ್ಕೆ ಮನಮಧುರೈ ಬಿಟ್ಟು ಬುಧವಾರ ರಾತ್ರಿ 1.55ಕ್ಕೆ ಮೈಸೂರು ತಲುಪಲಿದೆ.
ಈ ರೈಲು ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಿಲ್ದಾಣ ಬೆಂಗಳೂರು, ಬಂಗಾರಪೇಟೆ, ತಿರುಪ್ಪತ್ತೂರು,ಸೇಲಂ, ನಾಮಕ್ಕಲ್,ಕರೂರ್, ತಿರುಚ್ಚಿರಪ್ಪಳ್ಳಿ, ದಿಂಡಗಲ್, ಮಧುರೈಯಲ್ಲಿ ನಿಲುಗಡೆ ಹೊಂದಲಿದೆ.
ಈ ರೈಲಿನಲ್ಲಿ ಹವಾನಿಯಂತ್ರಿತ 2ನೇ ದರ್ಜೆಯ 2 ಬೋಗಿ, 3ನೇ ದರ್ಜೆಯ 6, ಸ್ಲೀಪರ್ ಕ್ಲಾಸ್ 9, ಸಾಮಾನ್ಯ ದರ್ಜೆಯ 2 ಬೋಗಿ ಸೇರಿದಂತೆ 21 ಬೋಗಿ ಇರುತ್ತದೆ.
ಮನ ಮಧುರೈ ರೈಲು ರಾಮೇಶ್ವರವರೆಗೂ ಸಂಚಾರ ಮಾಡುತ್ತದೆ. ಆದರೆ ಪಂಬನ್ ಸೇತುವೆ ರಿಪೇರಿ ಇರುವುದರಿಂದ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸೇತುವೆ ಕಾಮಗಾರಿ ಮುಗಿದ ನಂತರ ರೈಲು ರಾಮೇಶ್ವರ ದೊರೆಗೂ ಹೋಗುತ್ತದೆ ಎಂದು ಸಂಸದ ಪ್ರತಾಪ ಸಿಂಹ ತಮ್ಮ “ಎಕ್ಸ್ ‘ಖಾತೆಯಲ್ಲಿ ತಿಳಿಸಿದ್ದಾರೆ.