Advertisement

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೋವಿಡ್-19 ಪಾಸಿಟಿವ್

03:50 PM Aug 18, 2020 | keerthan |

ಮೈಸೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಿ.ಬಿ ರಿಷ್ಯಂತ್‌ಗೆ ಕೋವಿಡ್-19 ಸೋಂಕು ದೃಢವಾಗಿದೆ.

Advertisement

ಇತ್ತೀಚೆಗೆ ಎಸ್‌ಪಿ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢವಾಗಿತ್ತು. ಆ ಸಿಬ್ಬಂದಿಯ ಪ್ರಥಮ ಸಂಪರ್ಕದಲ್ಲಿದ್ದ ಎಸ್ ಪಿ ರಿಷ್ಯಂತ್ ಗೆ ಸೋಂಕು ದೃಢವಾಗಿದೆ.

ಸಿಬ್ಬಂದಿಗೆ ಸೋಂಕು ದೃಢವಾದ ಹಿನ್ನಲೆಯಲ್ಲಿ ಎಸ್ ಪಿ ರಿಷ್ಯಂತ್ ಅವರು ಸೋಮವಾರ ಸ್ವ್ಯಾಬ್ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಸೋಂಕು ದೃಢವಾಗಿದೆ.

ಯಾವುದೇ ರೋಗಲಕ್ಷಣವಿಲ್ಲದೆ ಸೋಂಕು ಪಾಸಿಟಿವ್ ಆದ ಕಾರಣ ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next