Advertisement

ಮೈಸೂರಿನ ಸಂತೋಷ್‌ ಹೊಗಳಿದ ಮೋದಿ

10:40 AM Feb 27, 2017 | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್‌ ಕಿ ಬಾತ್‌’ ನಲ್ಲಿ ಮೈಸೂರಿನ ಸಂತೋಷ್‌ರನ್ನು ಉಲ್ಲೇಖೀ­ಸುವ ಮೂಲಕ ಡಿಜಿಧನ ಹಾಗೂ ಲಕ್ಕಿ ಗ್ರಾಹಕ್‌ ಯೋಜನೆಯಿಂದಾದ ಲಾಭವನ್ನು ಹೇಳಿ ಕೊಂಡಿ­­ದ್ದಾರೆ.

Advertisement

“ನರೇಂದ್ರಮೋದಿ ಆ್ಯಪ್‌ನಲ್ಲಿ ಮೈಸೂರಿನ ಶ್ರೀಮಾನ್‌ ಸಂತೋಷ್‌ಜೀ ಅವರು ಬರೆದಿ­ರುವ ವಿಚಾರವನ್ನು ನಾನಿಲ್ಲಿ ಉಲ್ಲೇಖೀಸಲೇ­ಬೇಕು,’ ಎಂದು ಹೇಳುತ್ತಾ ಪ್ರಧಾನಿ ಕರ್ನಾ­ಟಕದ ಯುವಕನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. “ಲಕ್ಕಿ ಗ್ರಾಹಕ ಯೋಜನೆಯಡಿ ತನಗೆ ಒಂದು ಸಾವಿರ ರೂ. ಬಹುಮಾನ ಸಿಕ್ಕಿತ್ತು. ಆದರೆ, ಅದೇ ಸಮಯದಲ್ಲಿ ಬಡ ವೃದ್ಧೆಯೊಬ್ಬರ ಮನೆಗೆ ಬೆಂಕಿ ಬಿದ್ದು, ಆಕೆ ತನ್ನದೆಲ್ಲವನ್ನೂ ಕಳೆದುಕೊಂಡಿದ್ದರು. ಹಾಗಾಗಿ, ಬಹುಮಾನದ ಹಣವು ಸರಿಯಾದ ವ್ಯಕ್ತಿಗೇ ಸಲ್ಲಬೇಕೆಂದು ನಾನು ಸಾವಿರ ರೂಪಾಯಿಯನ್ನು ಆ ಅಜ್ಜಿಗೆ ನೀಡಿದೆ. ನನಗೆ ಇದು ಅತೀವ ಸಂತೃಪ್ತಿ ನೀಡಿತು,’ ಎಂದು ಸಂತೋಷ್‌ ಬರೆದು­ಕೊಂಡಿದ್ದಾರೆ.ಸಂತೋಷ್‌ ಅವರೇ, ನಿಮ್ಮ ಹೆಸರು ಮತ್ತು ನೀವು ಮಾಡಿರುವ ಉತ್ತಮ ಕಾರ್ಯ ಎರಡೂ ನಮಗೆ “ಸಂತೋಷ’ ಮತ್ತು ತೃಪ್ತಿಯ ಮೂಲಗಳು. ನಿಮ್ಮ ಕೆಲಸವು ಅತ್ಯಂತ ಸ್ಫೂರ್ತಿದಾಯಕ ಎಂದಿದ್ದಾರೆ ಮೋದಿ.
 

Advertisement

Udayavani is now on Telegram. Click here to join our channel and stay updated with the latest news.

Next