ಮೈಸೂರು: ಐಟಿಎಫ್ ಮೈಸೂರು ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ಸಿದ್ಧಾರ್ಥ್ ರಾವತ್ ಸೇರಿದಂತೆ ನಾಲ್ವರು ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 7ನೇ ಶ್ರೇಯಾಂಕದ ಸಿದ್ಧಾರ್ಥ್ ರಾವತ್ ಮಂಗಳವಾರದ ಮುಖಾಮುಖೀಯಲ್ಲಿ ಅಮೆರಿಕದ ಡಾಲಿ ಬ್ಲಾಂಕ್ ಅವರನ್ನು 6-3, 6-2ರಿಂದ ಮಣಿಸಿದರು. ಉಳಿದ ಪಂದ್ಯಗಳಲ್ಲಿ ಇಶಾಖ್ ಇಕ್ಬಾಲ್ 7-6 (4), 6-0 ಅಂತರದಿಂದ ಆರ್.ಸೂರಜ್ ಪ್ರಬೋಧ್ ಅವರನ್ನು; ಫೈಸಲ್ ಖಮರ್ 6-1, 6-1ರಿಂದ ರಿಷಿ ರೆಡ್ಡಿ ಅವರನ್ನು; ಕರಣ್ ಸಿಂಗ್ 6-3, 3-6, 7-6 (3)ರಿಂದ ಕಝಕಸ್ತಾನದ ಗ್ರಿಗೊರಿ ಲೊಮಾಕಿನ್ ಅವರನ್ನು ಮಣಿಸಿದರು. 25 ಸಾವಿರ ಡಾಲರ್ ಬಹುಮಾನ ಮೊತ್ತದ ಈ ಪಂದ್ಯಾವಳಿಯನ್ನು ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಶನ್ ಆಯೋಜಿಸುತ್ತಿದೆ.
Advertisement
ಮೈಸೂರು ಓಪನ್: ಭಾರತದ ನಾಲ್ವರ ಮುನ್ನಡೆ
11:00 PM Mar 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.