ಮೈಸೂರು: ಇಲ್ಲಿನ ವಿವಾದಿತ ಎನ್ ಟಿಎಂಎಸ್ ಶಾಲೆಯ ಕಟ್ಟಡವನ್ನು ಕಳೆದ ರಾತ್ರಿ ಜೆಸಿಬಿಗಳನ್ನು ಬಳಸಿ ನೆಲಸಮ ಮಾಡಲಾಗಿದೆ. ಇದನ್ನು ತಡೆಯಲು ಬಂದವರನ್ನು ಪೊಲೀಸರು ಮುಲಾಜಿಲ್ಲದೆ ಬಂಧಿಸಿದ್ದಾರೆ.
300 ಕೋಟಿ ರೂ. ಗೂ ಅಧಿಕ ಮೌಲ್ಯದ ಎನ್ ಟಿಎಂಎಸ್ ಶಾಲೆಯ ಸ್ಥಳವನ್ನು ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ 2008ರಲ್ಲಿ ರಾಜ್ಯ ಸರ್ಕಾರ ಉಚಿತವಾಗಿ ನೀಡಿತ್ತು. ಕಳೆದ ಹತ್ತು ವರ್ಷಗಳಿಂದ ಎನ್ ಟಿಎಂಎಸ್ ಕನ್ನಡ ಶಾಲೆ ಉಳಿಯಬೇಕೆಂದು ಪ್ರಗತಿಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದವು.
ಇದನ್ನೂ ಓದಿ:4 ತಿಂಗಳಲ್ಲಿ 4 ಸಾವಿರ ಮಕ್ಕಳಿಗೆ ಅಪೌಷ್ಟಿಕತೆ; ಉತ್ತರ ಕರ್ನಾಟಕದಲ್ಲಿ ಹೆಚ್ಚಿದೆ ಸಮಸ್ಯೆ
ಕಳೆದ ಮೂರು ದಿನಗಳ ಹಿಂದೆ ಎನ್ ಟಿಎಂಎಸ್ ಕನ್ನಡ ಶಾಲೆಯನ್ನು ಮಹಾರಾಣಿ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈ ಸ್ಥಳದಲ್ಲಿ ವಿವೇಕಾನಂದರ ಪ್ರಾರ್ಥನಾ ಮಂದಿರ ನಿರ್ಮಿಸಲು ರಾಮಕೃಷ್ಣ ಆಶ್ರಮ ಯೋಜನೆ ರೂಪಿಸಿದೆ.