ಹುಣಸೂರು : ಕಠಿಣ ಲಾಕ್ ಡೌನ್ ನಡುವೆ ಕಾರಿನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮದ್ಯ ಸಹಿತ ಬಂಧಿಸಿರುವ ಅಧಿಕಾರಿಗಳು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಕರಿಮುದ್ದನ ಹಳ್ಳಿಯಲ್ಲಿ ಗೌಡರ ಪುತ್ರ, ಕಿಸಾನ್ ಸಾಲ ಅಧ್ಯಕ್ಷ ವಸಂತಕುಮಾರ್ ಬಂಧಿತ ಆರೋಪಿ. ಈತನಿಂದ 40 ಲೀಟರ್ ನಷ್ಟು ಒರಿಜಿನಲ್ ಚಾಯ್ಸ್ ಪೆಟ್ರಾಫ್ಯಾಕ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಮೋದಿ ಆಡಳಿತದಲ್ಲಿ ಹಿಂದೆಂದೂ ಕಂಡಿರದ ಅಭಿವೃದ್ಧಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಮತ
ಇಂದು(ಭಾನುವಾರ, ಮೇ 30) ಮಧ್ಯಾಹ್ನ ಗದ್ದಿಗೆ ಮುಖ್ಯರಸ್ತೆಯ ಮೊದಲ ಪುರದಲ್ಲಿ ತನ್ನ ಕಾರಿನಲ್ಲಿ ಮದ್ಯದ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಗ್ರಾಮಾಂತರ ಎಸ್ಪಿ ಡಾಕ್ಟರ್ ಮಹದೇವಿ ಬಾಯಿ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿದ ವೇಳೆ ಕಾರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಪತ್ತೆಯಾಗಿ ಆರೋಪಿಯನ್ನು ಬಂಧಿಸಲಾಗಿದೆ.
ಆತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿವೈ ಎಸ್ಪಿ ಶ್ರೀನಿವಾಸ್ ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕ ಧರ್ಮರಾಜು ವಿಚಕ್ಷಣ ದಳದ ನಿರೀಕ್ಷಕರಾದ ಮಂಜುನಾಥ್, ಲೋಕೇಶ್,ಭಾಷಾ, ಗೋಪಾಲ, ಚಾಲಕ ಕೀರ್ತಿಕುಮಾರ್ ಭಾಗವಹಿಸಿದ್ದರು. ಸದ್ಯ, ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ತಮಿಳುನಾಡು ರಾಜಕೀಯಕ್ಕೆ ಶಶಿಕಲಾ ರಿ ಎಂಟ್ರಿ.? ಮತ್ತೆ ಎಐಎಡಿಎಂಕೆ ಗೆ ಶಶಿಕಲಾ ನೇತೃತ್ವ ?