Advertisement

ಹುಣಸೂರಲ್ಲಿ ಬಾಬು ಜಗಜೀವನ ರಾಂ ಪುಣ್ಯ ಸ್ಮರಣೆ

09:33 PM Jul 06, 2021 | Team Udayavani |

ಹುಣಸೂರು : ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಒಬ್ಬ ಕ್ರಾಂತಿಕಾರಕ ಕಾರ್ಯಕ್ರಮ ನೀಡಿದ ಜನಪರ, ಸಮರ್ಥ ನಾಯಕರಾಗಿದ್ದರೆಂದು ಶಾಸಕ ಎಚ್.ಪಿ.ಮಂಜುನಾಥ್ ಬಣ್ಣಿಸಿದರು.

Advertisement

ನಗರದ ಸಮಾಜಕಲ್ಯಾಣ ಇಲಾಖೆ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ ಜಗಜೀವನರಾಂ ಅವರ 36ನೇ ಪುಣ್ಯಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ದೇಶದಲ್ಲಿ ಹಸಿರು ಕ್ರಾಂತಿಯನ್ನು ಉಂಟು ಮಾಡಿದ ಪುಣ್ಯಾತ್ಮರ ಸ್ಮರಣೆಯಂದೇ ತಾಲೂಕಿನಲ್ಲಿ ಕಾರ್ಮಿಕ ವರ್ಗಕ್ಕೆ ಕಿಟ್ ವಿತರಿಸುತ್ತಿರುವುದು ತಮ್ಮ ಪುಣ್ಯ, ಆದರೆ ಕಿಟ್ ನೀಡುವುದು ಭಿಕ್ಷೆಯಲ್ಲ, ಇದನ್ನು ಕಾರ್ಮಿಕ ವರ್ಗದವರಿಗೆ ಗೌರವಯುತವಾಗಿ ವಿತರಿಸಬೇಕೆಂದು  ಸೂಚಿಸಿದರು.

ಇದನ್ನೂ ಓದಿ : ಅಮರ ವೀರಯೋಧ ಕಾಶಿರಾಯ ತ್ಯಾಗ ಯುವಕರಿಗೆ ಆದರ್ಶ : ಶಿವಾನಂದ ಪಾಟೀಲ

ರಕ್ಷಣಾ ಸಚಿವರಾಗಿ ಪ್ರಬುದ್ಧತೆಯಿಂದ ಕಾರ್ಯ ನಿರ್ವಹಿಸಿದ ಇವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಇವರು ಹಾಕಿಕೊಟ್ಟ ಕಾರ್ಯಕ್ರಮಗಳು ಜಾರಿಯಾಗಬೇಕಾದರೆ 70 ವರ್ಷ ಹಿಡಿದಿದೆ ಎಂದು ಬೇಸರಿಸಿ, ಇಂತಹ ಪುಣ್ಯಾತ್ಮರ ಬದುಕು, ಬವಣೆ, ಹೋರಾಟದ ಬಗ್ಗೆ ಯುವ ಪೀಳಿಗೆ ಅರಿಯಬೇಕೆಂದು ಆಶಿಸಿ, ಎರಡು ವರ್ಷಗಳಿಂದ ಕೊರೋನಾದಿಂದಾಗಿ ಎಲ್ಲ ದಾರ್ಶನಿಕರ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಆದಿಜಾಂಬವ ಜನಾಂಗದ ಜಿಲ್ಲಾ ಕಾರ್ಯದರ್ಶಿ ಡಿ.ಕುಮಾರ್, ಮುಖಂಡ ನಿಂಗರಾಜಮಲ್ಲಾಡಿರವರು ಮಾತನಾಡಿ ಗಾಧಿಂಜಿಯವರೊಟ್ಟಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಜಗಜೀವನರಾಂರವರು 45 ವರ್ಷಗಳ ಕಾಲ ಪಾರ್ಲಿಮೆಂಟ್‌ನ್ನು ಪ್ರತಿನಿಸಿದ್ದ ಇವರು ಅಸ್ಪೃಷ್ಯತೆ ವಿರುದ್ದ ಹೋರಾಟ ನಡೆಸಿದರು. ನಗರದಲ್ಲಿ ನಿರ್ಮಿಸಿರುವ ಭವನಕ್ಕೆ 17 ಲಕ್ಷರೂಗಳ ಕೊರತೆ ಇದ್ದು, ಶಾಸಕರು ಒತ್ತಡ ಹಾಕಿ ಅನುದಾನ ಕೊಡಿಸಬೇಕೆಂದರು. ಹಬ್ಬಗಳ ಸಮಿತಿಯ ಸದಸ್ಯ ಎಸ್.ಜಯರಾಂ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸವರಾಜು, ಸಮಾಜಕಲ್ಯಾಣ ಇಲಾಖೆಯ ಮೋಹನ್ ಕುಮಾರ್, ಸಿಡಿಪಿಓ ರಶ್ಮಿ, ಶಿಕ್ಷಣ ಇಲಾಖೆಯ ನಾಗರಾಜ್, ಸಂತೋಷ್ ಕುಮಾರ್, ಆರ್.ಐ.ನಂದೀಶ್, ನಗರಸಭಾ ಅಧ್ಯಕ್ಷೆ ಅನುಷಾ, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ಸದಸ್ಯ ಮನು, ಆದಿಜಾಂಬವ ಸಮುದಾಯದ ಗೌರವಾಧ್ಯಕ್ಷ ರಾಚಪ್ಪ, ಅಧ್ಯಕ್ಷ ಶಿವಣ್ಣ, ಮುಖಂಡರಾದ ಲೋಕೇಶ್, ಕೆ.ಸ್ವಾಮಿ, ಸಿದ್ದರಾಜು, ಕೆಂಪೇಗೌಡ, ಮತ್ತಿತರರಿದ್ದರು.

Advertisement

ಇದನ್ನೂ ಓದಿ : ಗೋವಾ ಬೀಚ್‌ನಲ್ಲಿ ಕಡಲೆಕಾಯಿ ಮಾರುತ್ತಿದ್ದ ಕರ್ನಾಟಕದ ಹುಡುಗ ಈಗ ಬ್ರಿಟನ್‌  ಸೈನಿಕ

Advertisement

Udayavani is now on Telegram. Click here to join our channel and stay updated with the latest news.

Next