Advertisement

ವಹಿಸಿದ ಕೆಲಸ ಮಾಡದೆ ಸುದ್ದಿಗೋಷ್ಠಿ ನಡೆಸಿರುವುದು ಎಷ್ಟು ಸರಿ: ಸಿಂಧೂರಿ

04:49 PM Jun 04, 2021 | Team Udayavani |

ಮೈಸೂರು: ಯಾವುದೇ ಅಧಿಕಾರಿಗೆ ಏನಾದರೂಸಮಸ್ಯೆ ಇದ್ದರೆ ಅದನ್ನು ಬಗೆಹರಿಸಿಕೊಳ್ಳಲು,ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆತರುವ ವಿಧಾನವಿದೆ. ಆದರೆ ಈ ಸ್ಥಾನದಲ್ಲಿರುವಂತಹ ಅಧಿಕಾರಿಯೊಬ್ಬರು ಈ ರೀತಿ ಪತ್ರಿಕಾಗೋಷ್ಠಿ ಕರೆದು ಅವಮಾನ ಮಾಡುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

Advertisement

ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಅವರುಮೈಸೂರು ಜಿಲ್ಲಾಧಿಕಾರಿ ರೋಹಿಣಿಸಿಂಧೂರಿ ಅವರವಿರುದ್ಧ ವ್ಯಕ್ತಪಡಿಸಿರುವ ಅಸಮಾಧಾನ ಹಾಗೂ ಆರೋಪಕ್ಕೆಸಂಬಧಪಟ್ಟಂತೆ ಪತ್ರಿಕಾ ಪ್ರಕಟಣೆಹೊರಡಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ತಮಗೆ ಏನಾದರು ಸಮಸ್ಯೆಯಾಗಿದ್ದರೆ ಸಂಬಂಧಪಟ್ಟ ಹಿರಿಯಅಧಿಕಾರಿಗಳ ಗಮನಕ್ಕೆ ತರಬೇಕು. ಆದರೆಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯಾಗಿ ಪತ್ರಿಕಾಗೋಷ್ಠಿ ಕರೆದು ಜಿಲ್ಲಾಧಿಕಾರಿ ವಿರುದ್ಧಆರೋಪ ಮಾಡಿ, ಅವಮಾನ ಮಾಡುವುದುಸರಿಯಲ್ಲ ಎಂದಿದ್ದಾರೆ.

ಮೈಸೂರು ನಗರ ಪಾಲಿಕೆಗೆ ಇತ್ತೀಚಿಗೆ ನಗರವ್ಯಾಪ್ತಿಯೊಳಗೆ ಸರ್ಕಾರಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯುವುದು ಹಾಗೂ ಸಕ್ರಿಯಪ್ರಕರಣಗಳ ಮೇಲೆ ನಿಗಾ ಇಡಲುಹಾಗೂ ಮೈಸೂರನ್ನು ಈ ಹಿಂದೆ ತಿಳಿಸಿದ್ದಂತೆ ಜುಲೈ 1ರೊಳಗೆ ಕೋವಿಡ್‌ ಸೋಂಕುಮುಕ್ತವಾಗಿಸಲು ಪ್ರತಿ ದಿನ ವಾರ್ಡ್‌ವಾರು ವರದಿಗಳನ್ನು ಸಿದ್ಧಪಡಿಸಿಶೀಘ್ರವೇ ನೀಡುವಂತೆ ಹೇಳಿದ್ದೆ.ಪ್ರಸ್ತುತ ಜಿÇÉೆಯ ಗ್ರಾಮೀಣ ಪ್ರದೇಶ ಗಳಲ್ಲಿಒಟ್ಟು 18 ಕೋವಿಡ್‌ ಕೇರ್‌ ಸೆಂಟರ್‌ಗಳುಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ8 ಸಾವಿರ ಸಕ್ರಿಯಪ್ರಕರಣಗಳಿವೆ. ಆದರೆ ತಮಗೆ ವಹಿಸಿದ ಕೆಲಸಮಾಡದೆ, ನನ್ನನ್ನು ಅವಮಾನಿಸಲು ಈ ರೀತಿ ಪತ್ರಿಕಾಗೋಷ್ಠಿ ಕರೆದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next