Advertisement

ಗುಡಿಸಲು ನಿವಾಸಿಗಳಿಗೆ ಶೀಘ್ರವೇ ಸೂರು: ಜಿಟಿಡಿ

07:44 PM Jul 11, 2021 | Team Udayavani |

ಮೈಸೂರು: ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಭಾರತ್‌ನಗರಕ್ಕೆ ಶಾಸಕ ಜಿ.ಟಿ. ದೇವೇಗೌಡ ಭೇಟಿ ನೀಡಿ ನಿವಾಸಿಗಳಕುಂದುಕೊರತೆ ಆಲಿಸಿ, ಬಡಾವಣೆಯ ಅಭಿವೃದ್ಧಿಗೆ ಒತ್ತುನೀಡಲಾಗುವುದು ಎಂದು ಹೇಳಿದರು.

Advertisement

ಭಾರತ್‌ ನಗರ ನಿವಾಸಿಗಳು, ಚರಂಡಿ, ಕುಡಿ ಯುವ ನೀರುಸೇರಿದಂತೆ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಟಿಡಿ, ಈಗಾಗಲೇ ಸಿಸಿ ರಸ್ತೆ ಮತ್ತುಚರಂಡಿನಿರ್ಮಿಸಿದ್ದು,ಬಾಕಿಇರುವ ಕಡೆ ಕ್ರಮಕೈಗೊಳ್ಳಲಾಗಿದೆ. ಬಹಳಷ್ಟು ಮಂದಿ ಇಂದಿಗೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದು,ಇವರಿಗೆ ಮಂಡಕಳ್ಳಿಯಲ್ಲಿರುವ ಆಶ್ರಯ ಯೋಜನೆಯಡಿ ನಿರ್ಮಿಸಿರುವ ಮನೆಗಳನ್ನು ನೀಡುವುದಾಗಿ ಭರವಸೆನೀಡಿದರು.

ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ, ಹೈಮಾಸ್ಟ್‌ ದೀಪ, ಶುದ್ಧನೀರಿನ ಘಟಕ ಪ್ರಾರಂಭಿಸಲು ಕ್ರಮ ಕೈಗೊಳ್ಳ ಲಾಗಿದ್ದು,ಕೂಡಲೇಕಾಮಗಾರಿ ಪ್ರಾರಂಭಿಸಲಾಗು ವುದು ಎಂದರು.ಬಳಿಕ ಅಮೃತ ಬಡಾವಣೆಗೆ ಸಂಬಂಧಿಸಿದಂತೆ ಜನರಿಂದಸಮಸ್ಯೆ ಆಲಿಸಿದ ಶಾಸಕರು, ನಿವಾಸಿಗಳಿಗೆ ಮೂಲ ಸೌಕರ್ಯಒದಗಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಗ್ರಾಪಂಮಾಜಿ ಅಧ್ಯಕ್ಷರಾದ ಮಂಜು, ಮಂಜುಗೌಡ, ಮಾಜಿ ತಾ.ಪಂ.ಸದಸ್ಯರಾದ ತಮ್ಮೇಗೌಡ, ಹಂಚ್ಯಾ ರಾಮಚಂದ್ರ, ಸಾತಗಳ್ಳಿಜಯಣ್ಣ, ಚನ್ನಪ್ಪ, ಯರಗನಹಳ್ಳಿ ಮಹೇಶ್‌, ರಾಜೇಶ್‌, ರಮ್ಮನಹಳ್ಳಿ ಶ್ರೀಕಾಂತ ಅರಸ್‌, ಮಂಜು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next