Advertisement

ಬಾರ್‌ ಪರವಾನಗಿ ವಿರೋಧಿಸಿ ಪ್ರತಿಭಟನೆ

09:35 PM Jul 09, 2021 | Team Udayavani |

ಮೈಸೂರು: ನಗರದ ಹೊರವಲಯದಲ್ಲಿರುವ ಆಲನಹಳ್ಳಿ ಬಡಾವಣೆಯಲ್ಲಿ ನಿಯಮಬಾಹಿರವಾಗಿ ಮದ್ಯಂದಡಿ ತೆರೆಯಲುಅನುಮತಿ ನೀಡಲಾಗಿದೆ ಎಂದು ಆರೋಪಿಸಿಸ್ಥಳೀಯರು ಪ್ರತಿಭಟಿಸಿದರು.

Advertisement

ಆಲನಹಳ್ಳಿ ಬಡಾವಣೆ ಶಾಲೆಯ ಬಳಿಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ್‌ಸ್ವಾಮೀಜಿ ನೇತೃತ್ವದಲ್ಲಿ ಜೈ ಭೀಮ್‌ ಸಂಘಟನೆ ,ಆಲನಹಳ್ಳಿಯ ಗ್ರಾಮಸ್ಥರು ಪ್ರತಿಭಟಿಸಿ, ಬಾರ್‌ಪರನವಾಗಿ ರದ್ದುಗೊಳಿಸುವಂತೆ ಆಗ್ರಹಿಸಿದರು.ಮದ್ಯದಂಗಡಿ ತೆರೆಯುವ 100 ಮೀಟರ್‌ಅಂತರದಲ್ಲಿ ಯಾವುದೇ ಸಾರ್ವಜನಕ ಸ್ಥಳಇರುವಂತಿಲ್ಲ ಎಂಬ ನಿಯಮವಿದ್ದರೂ, ಅದನ್ನುಉಲ್ಲಂ ಸಿ ಬಾರ್‌ ತೆರೆಯಲು ಪರವಾನಗಿನೀಡಲಾಗಿದೆ.

ಅನುಮತಿ ನೀಡುವ ಪ್ರದೇಶದಹತ್ತಿರದಲ್ಲಿ ಮಹದೇಶ್ವರ ದೇವಸ್ಥಾನ, ಶಾಲೆ,ಆಟೋ ನಿಲ್ದಾಣ, ಮೆಡಿಕಲ್‌ ಸೇರಿದಂತೆಸಾರ್ವಜನಿಕ ಸ್ಥಳಗಳಿವೆ. ಹೀಗಿದ್ದರೂ ಯಾವಆಧಾರದ ಮೇಲೆ ಅಬಕಾರಿ ಇಲಾಖೆಪರವಾನಗಿ ನೀಡಿದೆ ಎಂದು ಪ್ರಶ್ನಿಸಿದರು.ಸ್ಥಳಕ್ಕೆ ಧಾವಿಸಿದ ಅಬಕಾರಿ ನಿರೀಕ್ಷಕ ಮತ್ತುಕೆ.ಆರ್‌.ವೃತ್ತದ ಇನ್ಸ್‌ಪೆಕ್ಟರ್‌ಗೆ ಪರವಾನಗಿರದ್ದುಗೊಳಿಸುವಂತೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಶಿವ ಮಹಾದೇವ, ಸಿದ್ದಯ್ಯ,ಮರಿದೇವಯ್ಯ, ಜೈ ಭೀಮ್‌ ಅಂಬೇಡ್ಕರ್‌ಸಂಘದ ಪದಾಧಿಕಾರಿಗಳು, ಆಲನಹಳ್ಳಿಯಯಜಮಾನರು ಮತ್ತು ಗ್ರಾಮಸ್ಥರುಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next