ಹುಣಸೂರು : ಹುಣಸೂರು ತಾಲೂಕಿನ ಮನುಗನಹಳ್ಳಿಯ ಶ್ರೀಧ ಇನ್ಪ್ರಾ ಡೆವಲಪರ್‍ಸ್‌ನ ಮುಖ್ಯಸ್ಥ ಹಾಗೂ ಗ್ರಾಮಪಂಚಾಯ್ತಿ ಅಧ್ಯಕ್ಷ ಶ್ರೀಕಂಠೇಗೌಡ ಹಾಗೂ ಡೀಡ್ ಸಂಸ್ಥೆ, ಪತ್ರಿಕೆ ಹಂಚುವ ಹುಡುಗರಿಗೆ ಕೊಡಮಾಡಿದ ಪಡಿತರ ಕಿಟ್‌ನ್ನು ವಿತರಿಸಲಾಯಿತು.
ನಗರದ ತಾಲೂಕು ಪತ್ರಕರ್ತರ ಸಂಘದ ಕಚೇರಿ ಆವರಣದಲ್ಲಿ ಕಿಟ್‌ನ್ನು ವಿತರಿಸಿ ಮಾತನಾಡಿದ ಡೀಡ್ ಸಂಸ್ಥೆಯ ನಿರ್ಧೇಶಕ ಡಾ.ಎಸ್.ಶ್ರೀಕಾಂತ್ ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪತ್ರಿಕೆ ಹಂಚುವ ಹುಡುಗರು ಹಾಗೂ ಪ್ರತಿನಿಧಿಗಳ ಕುಟುಂಬಗಳ ನೆರವಿಗೆ ಸಂಸ್ಥೆವತಿಯಿಂದ ಅಗತ್ಯ ಪಡಿತರ ಕಿಟ್ ಹಾಗೂ ಆಯುರ್ವೇದ ಅರ್ಕ್ ಎ ಅಜೀಬ್ ದ್ರಾವಣ ವಿತರಿಸಲು ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ, ಪತ್ರಿಕಾ ವಿತರಕರು ಕಳೆದೊಂದು ವರ್ಷದಿಂದ ಹಗಲಿರುಳು ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದರೂ ಇವರ ಸೇವೆಯನ್ನು ಸರಕಾರ ಪರಿಗಣಿಸದಿರುವುದು ದೌರ್ಬಾಗ್ಯ, ಇನ್ನಾದರೂ ಗಂಭೀರವಾಗಿ ಪರಿಗಣಿಸಿ ಪತ್ರಿಕಾ ವಿತರಕರಿಗೂ ಸರಕಾರದ ವ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ :
ಕೋವಿಡ್: ರಾಜ್ಯದಲ್ಲಿಂದು 5933 ಸೋಂಕಿತರು ಗುಣಮುಖ; 2576 ಹೊಸ ಪ್ರಕರಣ ದೃಢ
ತಾಲೂಕು ಪತ್ರಿಕಾವಿತರಕರ ಸಂಘದ ಅಧ್ಯಕ್ಷ ಹನಗೋಡು ನಟರಾಜ್ ಮನುಗನಹಳ್ಳಿಯ ಗ್ರಾ.ಪಂ.ಅಧ್ಯಕ್ಷ ಶ್ರೀಕಂಠೇಗೌಡರು ಹಾಗೂ ಡೀಡ್ ಸಂಸ್ಥೆಯ ಕೊಡುಗೆಯನ್ನು ಸ್ಮರಿಸಿ, ಡೀಡ್‌ನ ಡಾ.ಶ್ರೀಕಾಂತ್, ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ.ರಾಮು ಹಾಗೂ ಶ್ರೀಕಂಠೇಗೌಡರ ಮಾಲಿಕತ್ವದ ಶ್ರೀಧ ಇನ್‌ಫ್ರಾ ಡೆವಲಪರ್‍ಸ್‌ನ ವ್ಯವಸ್ಥಾಪಕ ಪ್ರಶಾಂತ್‌ರನ್ನು ಸಂಘದ ಪರವಾಗಿ ಅಭಿನಂದಿಸಿದರು.
ಈ ವೇಳೆ ಪತ್ರಿಕಾ ವಿತರಕರ ಸಂಘದ ಪ್ರಧಾನ ಕಾರ್ಯದರ್ಶಿ ಯೋಗೀಶ್, ಪದಾಧಿಕಾರಿಗಳಾದ ಸಚ್ಚಿತ್, ಗುರುಸ್ವಾಮಿ, ಪ್ರತಾಪ್, ಎಚ್.ಕೆ.ಕೃಷ್ಣ, ಕೆ.ಕೃಷ್ಣ, ರಮೇಶ್, ಪತ್ರಕರ್ತರ ಸಂಘದ ಕಾರ್ಯದರ್ಶಿ ನೇರಳಕುಪ್ಪೆಮಹದೇವ್ ಸೇರಿದಂತೆ ವಿತರಕರು ಇದ್ದರು.
ಇದನ್ನೂ ಓದಿ : ರಾಜ್ಯದ ಎಸ್ಎಸ್ಎಲ್ ಸಿ ಪರೀಕ್ಷೆ ದಿನಾಂಕ ಪ್ರಕಟಿಸಿದ ಸಚಿವ ಸುರೇಶ್ ಕುಮಾರ್