Advertisement

ಮೈಸೂರು ಪಾಲಿಕೆ ಚುನಾವಣೆ: ಬಿಜೆಪಿ ಲೆಕ್ಕಾಚಾರ ಉಲ್ಟಾ, ಜೆಡಿಎಸ್‌ ತೆಕ್ಕೆಗೆ ಮೇಯರ್‌ ಪಟ್ಟ!

01:14 PM Feb 24, 2021 | Team Udayavani |

ಮೈಸೂರು: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್‌-ಉಪಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸಾಧಿಸಿವೆ. ಜೆಡಿಎಸ್‌ ತೆಕ್ಕೆಗೆ ಮೇಯರ್‌ ಪಟ್ಟ ಲಭಿಸಿದೆ.

Advertisement

ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಅವರು ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ಅನ್ವರ್‌ ಬೇಗ್‌‌ ಅವರಿಗೆ ಉಪಮೇಯರ್‌ ಸ್ಥಾನ ಲಭಿಸಿದೆ.

ಜೆಡಿಎಸ್‌ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಅವರು 43 ಮತಗಳ ಮೂಲಕ ಮೇಯರ್‌ ಸ್ಥಾನ ಅಲಂಕರಿಸಿದರು. ಬಿಜೆಪಿ ಸುನಂದಾ ಪಾಲನೇತ್ರ ಅವರು 26 ಮತಗಳನ್ನಷ್ಟೇ ಪಡೆದರು.

ಬಿಜೆಪಿ ಲೆಕ್ಕಾಚಾರ ತಲೆಕೆಳಗು: ಇದೇ ಮೊದಲ ಬಾರಿಗೆ ಮೈಸೂರು ಪಾಲಿಕೆಯಲ್ಲಿ ಅಧಿಕಾರ ಪಡೆಯಲು ಬಿಜೆಪಿ ಹರಸಾಹಸ ಪಟ್ಟಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅಖಾಡಕ್ಕಿಳಿದಿದ್ದು, ಇವರೊಂದಿಗೆ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಲ್‌.ನಾಗೇಂದ್ರ, ರಾಮ ದಾಸ್‌ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮಂಗಳವಾರ ಸಂಜೆ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹೊಂದಾಣಿಕೆ ನಡೆಸಿ ಮೈತ್ರಿ ಸಾಧಿಸಿದ್ದು, ಬಿಜೆಪಿ ಕನಸಿಗೆ ಎಳ್ಳು ನೀರು ಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next