Advertisement
ಹಾಗೆ ನೋಡಿದರೆ, ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳ ಸಂಖ್ಯೆಗೇನು ಕೊರತೆ ಇಲ್ಲ. ಹಾಲಿ ಸಂಸದರಿಗೇ ಟಿಕೆಟ್ ಎನ್ನುವ ನಿಟ್ಟಿನಲ್ಲಿ ಸಂಸದ ಪ್ರತಾಪ್‌ಸಿಂಹ ಅವರು, ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ತಾವು ಮಾಡಿರುವ ಸಾಧನೆಯ ಜೊತೆಗೆ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲೂ ತೊಡಗಿರುವುದರಿಂದ ತಾವೇ ಅಭ್ಯರ್ಥಿ ಎನ್ನುತ್ತಾ ಮತದಾರರ ಮನಗೆಲ್ಲುವ ಯತ್ನ ನಡೆಸಿದ್ದಾರೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಕೊಡಗಿನವರಿಗೂ ಒಮ್ಮೆ ಅವಕಾಶ ಕೊಡಿ ಎಂದು ಟಿಕೆಟ್‌ಗಾಗಿ ಹಕ್ಕು ಮಂಡಿಸಿದ್ದರೆ,ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಕೂಡ ಈ ಚುನಾವಣೆಯಲ್ಲಿ ಟಿಕೆಟ್ ಬಯಸಿದ್ದಾರೆ. ಆಮತ್ತೂಮ್ಮೆ ಮೋಅಧಿಕಾರಕ್ಕೆ ಬರಬೇಕು ಕಾರಣಕ್ಕೆ ಯಾರಿಗೇ ಟಿಕೆಟ್ ಸಿಕ್ಕರೂ ಉಳಿದ ಆಕಾಂಕ್ಷಿ ಗಳು ಪಕ್ಷದ ಗೆಲುವಿಗಾಗಿ ದುಡಿಯಲಿಎಂಬ ಬಿಜೆಪಿಯವರಲ್ಲಿದೆ. ಹಿಂದೊಮ್ಮೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿ ಜಿಲ್ಲೆಯಲ್ಲಿ ಹಿಡಿತ ಹೊಂದಿರುವ ಶೋಭಾ ಕರಂದ್ಲಾಜೆ ಅವರ ಕಣ್ಣೂ ಕ್ಷೇತ್ರದ ಮೇಲಿದೆ ಎಂದು ಹೇಳಲಾಗುತ್ತಿದೆ. ಮೈತ್ರಿ ಗೊಂದಲ: ರಾಜ್ಯದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್‌ನವರಲ್ಲಿ ಇನ್ನೂ ರಾಜ್ಯಮಟ್ಟದಲ್ಲಿ ಸ್ಥಾನ ಹೊಂದಾಣಿಕೆಯ ಗೊಂದಲವೇ ಬಗೆಹರಿದಿಲ್ಲ. 12 ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಸಲ್ಲಿಸಿದ್ದರೆ, ಅಷ್ಟು ಕ್ಷೇತ್ರ ಬಿಟ್ಟು ಕೊಡಲಾಗುವುದಿಲ್ಲ ಎಂದು ಕಾಂಗ್ರೆಸ್ ಚೌಕಾಸಿ ಡೆಸಿದೆ. ಜೆಡಿಎಸ್‌ನ ಕೋಟೆಗಳಾಗಿರುವ ಹಾಸನ ಮತ್ತು ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ, ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರ ಕಾಂಗ್ರೆಸ್‌ಗೆ ಎಂದು ಹೇಳಲಾಗುತ್ತಿದೆಯಾದರೂ ಎರಡೂ ಪಕ್ಷಗಳಲ್ಲಿನ ಸ್ಥಳೀಯ ಮುಖಂಡರು ಇದಕ್ಕೆ ಅಪಸ್ವರ ಎತ್ತಿರುವುದರಿಂದ ಗೊಂದಲ ಬಗೆಹರಿಯದಾಗಿದೆ. ಶೀಘ್ರವೇ ಈ ಗೊಂದಲ ಬಗೆಹರಿಯದಿದ್ದರೆ ಎರಡೂ ಪಕ್ಷಗಳಿಗೂ ಹಾನಿಯಾಗಲಿದ್ದು, ಬಿಜೆಪಿಗೆ ವರದಾನವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Related Articles
Advertisement
ಈ ಗೊಂದಲದ ನಡುವೆಯೇ ಕಾಂಗ್ರೆಸ್‌ನಲ್ಲೂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ಗೆ ಕರೆ ತಂದಿರುವ ಈ ಕ್ಷೇತ್ರವನ್ನು ಬಿಜೆಪಿಯಿಂದ ಎರಡು ಬಾರಿ ಪ್ರತಿನಿಧಿಸಿದ್ದ ಸಿ.ಎಚ್.ವಿಜಯಶಂಕರ್ ಪ್ರಬಲ ಆಕಾಂಕ್ಷಿ.
ಅವರ ಜೊತೆಗೆ, ಎಐಸಿಸಿ ಕಾರ್ಯದರ್ಶಿಗಳಾದ ಮಾಜಿ ಮುಖ್ಯಮಂತ್ರಿ .ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗಡೆ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಜೆ.ಜೆ.ಆನಂದ್, ದಾಸೇಗೌಡಮೊದಲಾದವರು ಟಿಕೆಟ್ ಬಯಸಿದ್ದಾರೆ. ಹಿರಿಯ ವಕೀಲ ಚಂದ್ರಮೌಳಿ ಅವರ ಹೆಸರೂ ಚಾಲ್ತಿಯಲ್ಲಿದೆ. ಮೈತ್ರಿ ಧರ್ಮದ ಪ್ರಕಾರ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಬೇಕು. ಕಾಂಗ್ರೆಸ್ ಪಕ್ಷದ ಹಿತವೇ ನಮಗೆ ಮುಖ್ಯ.
● ಸೂರಜ್ ಹೆಗಡೆ, ಎಐಸಿಸಿ ಮುಖಂಡ. ಗಿರೀಶ್ ಹುಣಸೂರು