Advertisement

ಮೈಸೂರಲ್ಲಿ ಮೈಕೊರೆವ ಚಳಿ!

06:00 AM Nov 12, 2018 | |

ಬೆಂಗಳೂರು: ಮೈಸೂರಲ್ಲಿ ಈಗ ಮೈಕೊರೆವ ಚಳಿ ಇದ್ದು, ಭಾನುವಾರ ಬೆಳಿಗ್ಗೆ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 6 ಡಿಗ್ರಿ ಸೆಲ್ಸಿಯಸ್‌ ಕಡಿಮೆ ದಾಖಲಾಗಿದೆ.

Advertisement

ಅ. 30ರಂದು ಇಲ್ಲಿ ಅತ್ಯಂತ ಕನಿಷ್ಠ 11.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಹತ್ತು ದಿನಗಳ ಅಂತರದಲ್ಲಿ ಮತ್ತೆ ಕನಿಷ್ಠ ತಾಪಮಾನ 13.1 ಡಿಗ್ರಿ ದಾಖಲಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ 2ರಿಂದ 3 ಡಿಗ್ರಿ ಕಡಿಮೆ ಇರುತ್ತದೆ. ಆದರೆ, ಬೆಳಿಗ್ಗೆ 8.30ಕ್ಕೆ ದುಪ್ಪಟ್ಟು ಅಂದರೆ 6 ಡಿಗ್ರಿ ಕುಸಿತ ಕಂಡಿದೆ. ರಾಜ್ಯದಲ್ಲಿ ಭಾನುವಾರದ ಮಟ್ಟಿಗೆ ಅತಿ ಕಡಿಮೆ ಉಷ್ಣಾಂಶ ಇದಾಗಿದೆ.

ಅದೇ ರೀತಿ, ಚಿತ್ರದುರ್ಗ ಮತ್ತು ವಿಜಯಪುರದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಇದ್ದು, ಕ್ರಮವಾಗಿ 16.2 ಮತ್ತು 16.4 ಡಿಗ್ರಿ ಇದೆ. ಆದರೆ, ಇದಾವುದೂ ದಾಖಲೆ ಪ್ರಮಾಣದ ಕನಿಷ್ಠ ಉಷ್ಣಾಂಶ ಅಲ್ಲ. ಹಿಂದಿನ ವರ್ಷಗಳಲ್ಲಿ ಇದೇ ತಿಂಗಳಲ್ಲಿ ಹಲವು ಬಾರಿ ಇದಕ್ಕಿಂತ ಕಡಿಮೆ ಉಷ್ಣಾಂಶ ದಾಖಲಾದ ಉದಾಹರಣೆಗಳಿವೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಸ್ಪಷ್ಟಪಡಿಸಿದೆ.

ಸುಮಾರು ದಿನಗಳಿಂದ ಮಳೆ ಆಗಿಲ್ಲ. ಮಳೆಗೆ ಪೂರಕವಾದ ಸನ್ನಿವೇಶಗಳೂ ಸೃಷ್ಟಿಯಾಗಿಲ್ಲ. ಇದರಿಂದ ವಾತಾವರಣದಲ್ಲಿ ತೇವಾಂಶ ಇಲ್ಲ. ಒಣಹವೆ ಇರುವುದರಿಂದ ಭೂಮಿಗೆ ಬೀಳುವ ಸೂರ್ಯನ ಕಿರಣಗಳು, ಪ್ರತಿಫ‌ಲನಗೊಂಡು ಹೊರಹೋಗುತ್ತವೆ. ಇದು ಕನಿಷ್ಠ ಉಷ್ಣಾಂಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next