Advertisement
ನಾಗರಹೊಳೆ ಉದ್ಯಾನವದ ಅಧಿಕಾರಿಗಳು ಹಾಗೂ ಇಲ್ಲಿನ ಸಿಬ್ಬಂದಿಗಳು ಅರಣ್ಯವನ್ನು ಜತನದಿಂದ ಕಾಪಾಡಿದ್ದರಿಂದಾಗಿ ಜೊತೆಗೆ 643 ಚ.ಕಿ.ಮೀ.ವಿಸ್ತೀರ್ಣವಿದ್ದ ನಾಗರಹೊಳೆ ವನ್ಯಜೀವಿ ವಲಯಕ್ಕೆ 200 ಚ.ಕಿ.ಮೀ ಬಫರ್ ಜೋನ್ ಸೇರ್ಪಡೆಗೊಂಡಿದ್ದರಿಂದಾಗಿ ಹಲವಾರು ಸಸ್ಯ ಪ್ರಬೇಧಗಳು, ಸಸ್ಯನಿಗಳು, ಉರಗ ಜೊತೆಗೆ ವನ್ಯಪ್ರಾಣಿಗಳ ಆವಾಸ ಸ್ಥಾನ, ಸ್ವಚ್ಚಂದ ವಿಹಾರಕ್ಕೆ ಹೇಳಿ ಮಾಡಿಸಿದ ಪ್ರಾಶಸ್ಯ ತಾಣವಾಗಿದ್ದು, ಇತ್ತೀಚಿನ ವನ್ಯಪ್ರಾಣಿಗಳ ಸಂತತಿಯೂ ಗಣನೀಯವಾಗಿ ಏರಿಕೆ ಕಂಡಿರುವುದು ಅರಣ್ಯದೊಳಗೆ ಹುಲಿ ಕಾಳಗವು ಸಾಧರಪಡಿಸಿದೆ.
Related Articles
Advertisement
ಕೆಲ ದಿನಗಳ ಹಿಂದೆ ಸಫಾರಿಗೆ ತೆರಳಿದ್ದ ವನ್ಯಪ್ರೀಯರು ಹುಲಿ-ಕಪ್ಪು ಚಿರತೆಯ ಸಮಾಗಮವನ್ನು ಕಣ್ತುಂಬಿಕೊಂಡಿದ್ದರು. ಆನೆ, ಕರಡಿಗಳು ಸ್ವಚ್ಚಂದವಾಗಿ ವಿಹರಿಸುತ್ತಿದ್ದ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದರು. ಇದೀಗ ಕುಂತೂರು ಕೆರೆ ರಸ್ತೆಯಲ್ಲಿ ಎರಡು ವ್ಯಾಘ್ರಗಳ ಕಾಳಗ ಕಂಡು ಒಂದು ಕ್ಷಣ ಎದೆ ಜಲ್ ಎನಿಸಿದರೂ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ದಿಲ್ ಖುಷ್ ಆಗಿ ಹಿಂತಿರುಗಿದ್ದಾರೆ.
ಇದನ್ನೂ ಓದಿ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮರೆತ ಸರಕಾರ!