Advertisement

ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ಚಿನ್ನ ಕದ್ದು ಅಡವಿಟ್ಟ ಖದೀಮ ಈಗ ಪೊಲೀಸರ ಅತಿಥಿ

11:38 AM Aug 06, 2021 | Team Udayavani |

ಹುಣಸೂರು: ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದ ಯುವಕನೊರ್ವ ಕೆಲಸ ಮಾಡತ್ತಿದ್ದ ಚಿನ್ನಾಭರಣದ ಅಂಗಡಿಯಲ್ಲೇ ಚಿನ್ನಾಭರಣ ಕದ್ದು,ಅಡವಿಟ್ಟಿದ್ದ ಘಟನೆಯನ್ನು ಹುಣಸೂರು ನಗರ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹುಣಸೂರು ನಗರದ ಜೆಎಲ್‌ ಬಿ ರಸ್ತೆಯ ಪೃಥ್ವಿ ಜ್ಯುವಲರ್‍ಸ್ ಅಂಗಡಿಯಲ್ಲಿ ನಡೆದಿದ್ದು, ತಾಲೂಕಿನ ರತ್ನಪುರಿಯ ಶಿವರಾಮ್ ಎಂಬಾತನೇ ಅನ್ನ ಹಾಕಿದ ಮನೆಗೆ ಕನ್ನ ಹಾಕಿ ಬಂಧನಕ್ಕೊಳಗಾದಾತ. ಈತನಿಂದ ಸುಮಾರು 25 ಲಕ್ಷರೂ ಬೆಲೆ ಬಾಳುವ 503 ಗ್ರಾಂ.ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಮುಂದಿನ ನಾಲ್ಕು ತಿಂಗಳಲ್ಲಿ 136 ಕೋಟಿ ಡೋಸ್ ಭಾರತದಲ್ಲಿ ಲಭ್ಯ : ಕೇಂದ್ರ ಸರ್ಕಾರ

ಹುಣಸೂರು ತಾಲೂಕಿನ ರತ್ನಪುರಿ ನಿವಾಸಿ ಶಿವರಾಮ್ ಕಳೆದ 9 ವರ್ಷಗಳಿಂದ ನಗರದ ಜೆಎಲ್‌ಬಿ ರಸ್ತೆಯ ಪೃಥ್ವಿ ಜ್ಯುವೆಲರ್‍ಸ್‌ನಲ್ಲಿ ಕೆಲಸ ಮಾಡುತ್ತಿದ್ದ, ಅಂಗಡಿಗೆ ಕಾರುಗಳಲ್ಲಿ ಬರುತ್ತಿದ್ದ ಗಿರಾಕಿಗಳು, ತನ್ನ ಸ್ನೇಹಿತರು ಕಾರುಗಳಲ್ಲಿ ಓಡಾಡುತ್ತಿದ್ದುದ್ದನ್ನು ಕಂಡ ಶಿವರಾಮ್ ತಾನು ಸಹ ಕಾರು ತೆಗೆದುಕೊಳ್ಳಲು ತೀರ್ಮಾನಿಸಿ, ಕೆಲಸ ಮಾಡುತ್ತಿದ್ದ ಚಿನ್ನಾಭರಣದ ಅಂಗಡಿಯಲ್ಲಿ 2019 ರಿಂದ ಆಗಾಗ್ಗೆ ಒಂದೊಂದೇ ಚಿನ್ನಾಭರಣಗಳನ್ನು ಕದಿಯಲಾರಂಭಿಸಿದ. ಕದ್ದ ಚಿನ್ನವನ್ನು ನಗರದ ಗಿರವಿ ಅಂಗಡಿಗಳಲ್ಲೇ ಗಿರವಿ ಇಡುತ್ತಿದ್ದ, ಇತ್ತೀಚೆಗೆ ಶಿವರಾಮ್‌ನನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿತ್ತು, ಈ ವೇಳೆ ಚಿನ್ನಾಭರಣ ಕಡಿಮೆಯಾಗಿರುವುದು ಪತ್ತೆಯಾಗಿತ್ತು. ನಗರ ಠಾಣೆಯಲ್ಲಿ ವ್ಯವಸ್ಥಾಪಕ ಸಂತೋಷ್‌ ರಾಜೇ ಅರಸ್ ಅ.2 ರಂದು ದೂರು ನೀಡಿದ್ದರು.

ಎಸ್.ಪಿ. ಆರ್.ಚೇತನ್,  ಅಡಿಷನಲ್ ಎಸ್.ಪಿ. ಶಿವಕುಮಾರ್, ಡಿವೈಎಸ್‌ ಪಿ ರವಿಪ್ರಸಾದ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಸಿ.ವಿ.ರವಿ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಚಿನ್ನಾಭರಣ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕಾರ್ಯಾಚರಣೆಯಲ್ಲಿ ಎಸ್.ಐ.ಗಳಾದ ಲತೇಶ್‌ ಕುಮಾರ್, ಪಂಚಾಕ್ಷರಿ ಸ್ವಾಮಿ ಸಿಬ್ಬಂದಿಗಳಾದ ಪ್ರಭಾಕರ್, ಶ್ರೀನಿವಾಸ ಪ್ರಸಾದ್, ಶೇಖರ್, ಕುಮಾರ್, ಜಗದೀಶ, ಇರ್ಫಾನ್ ಭಾಗವಹಿಸಿದ್ದರು.

ಇದನ್ನೂ ಓದಿ :  ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜೀನಾಮೆಗೆ ರೆವಲ್ಯೂಶನ್ ಗೋವನ್ಸ್ ಒತ್ತಾಯ..!

Advertisement

Udayavani is now on Telegram. Click here to join our channel and stay updated with the latest news.

Next