Advertisement
ಮೈತ್ರಿ ಸರ್ಕಾರ ಕೆಡವಿ ಬಿಎಸ್‌ವೈ ಸರ್ಕಾರ ರಚನೆಗೆ ಕಾರಣರಾದವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕಾರಣಕ್ಕೆ ಮೈಸೂರು ಭಾಗದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗದು ಎಂಬ ಹೇಳಿಕೆ ಈ ಬಾರಿಯ ನೂತನ ಸಚಿವ ಸಂಪುಟ ರಚನೆಗೂ ಅನ್ವಯವಾಗಲಿದೆ ಎಂದು ಹೈಕಮಾಂಡ್ ಪರೋಕ್ಷವಾಗಿ ಹೇಳಿದಂತಿದೆ.
Related Articles
ಯಡಿಯೂರಪ್ಪ ಸರ್ಕಾರದಲ್ಲಿವಿ. ಸೋಮಣ್ಣ ಒಂದು ವರ್ಷ ಮೈಸೂರು ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ ಕೆಲಸ ಮಾಡಿದ್ದರು.ಬಳಿಕಅವರನ್ನು ಕೊಡಗು ಉಸ್ತುವಾರಿ ಮಂತ್ರಿಯಾಗಿ ನೇಮಿಸಿ, ಮೈಸೂರು ಜಿಲ್ಲೆಗೆಎಸ್.ಟಿ.ಸೋಮಶೇಖರ್ ಅವರನ್ನು ನೇಮಿಸಲಾಯಿತು.ಹೊರ ಭಾಗದವರೇ ಮೈಸೂರು ಜಿಲ್ಲೆಯಲ್ಲಿ ಸ್ತುವಾರಿ ಮಂತ್ರಿಯಾಗಿ ದರ್ಬಾರು ನಡೆಸುತ್ತಿರುವುದು ಸ್ಥಳೀಯ ಬಿಜೆಪಿಯೊಳಗೆ ಸಹಜವಾಗಿ ಅಸಮಾಧನಕ್ಕೆ ಕಾರಣವಾಗಿತ್ತು. ಮತ್ತೆ ಬೊಮ್ಮಾಯಿ ಸರ್ಕಾರದಲ್ಲೂ ಸೋಮಶೇಖರ್ ಅವರೇ ಮೈಸೂರುಉಸ್ತುವಾರಿ ಸಚಿವರಾಗಿ ಮುಂದುವರೆಯುವ ಸಾಧ್ಯತೆ ಬಹುಪಾಲು ಖಚಿತವಾಗಿದೆ.ಒಟ್ಟಾರೆ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆದಂತೆ ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರದಲ್ಲಿಯೂ ಮೈಸೂರು ಕಡೆಗಣಿಸಲ್ಪಟ್ಟಿದೆ.
Advertisement
ಇದನ್ನೂ ಓದಿ:ನಳಿನ್ ಕುಮಾರ್ ತಂಡಕ್ಕೆ ಮರ್ಮಾಘಾತ ನೀಡಿದ ಯಡಿಯೂರಪ್ಪ: ಕಾಂಗ್ರೆಸ್ ಟೀಕೆ
ಮೈತ್ರಿ ಸರ್ಕಾರದಲ್ಲಿತ್ತು ವಿಶೇಷ ಪ್ರಾತಿನಿಧ್ಯ ಈ ಹಿಂದೆ ಇದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ಮೈಸೂರು ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿತ್ತು. ಮೈಸೂರಿನ ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್ ಸಚಿವರಾಗಿ ಗಮನ ಸೆಳೆಯುವ ಮೂಲಕ ಮೈಸೂರು ಜಿಲ್ಲೆಯ ಪ್ರಗತಿಗೆ ವಿಶೇಷಆಸಕ್ತಿ ವಹಿಸಿದ್ದರು. ಆದರೆ,ಬಿಜೆಪಿ ಸರ್ಕಾರ ರಚನೆ ನಂತರ ಮೈಸೂರು ಭಾಗದ ಮೂವರು ಶಾಸಕರನ್ನು ಕಡೆಗಣಿಸಲಾಗಿದೆ. ಇದರಿಂದ ಶಾಸಕರ ವೈಯಕ್ತಿಕ ವರ್ಚಸ್ಸು, ಕಾರ್ಯವೈಖರಿ, ಪ್ರಭಾವ ಮತ್ತು ಅನುಭವ ಮೂಲೆಗುಂಪಾದಂತಾಗಿದೆ. ಮೈಸೂರಿಗೆ ಈ ಬಾರಿಯಾದರೂ ಪ್ರಾತಿನಿಧ್ಯ ಸಿಗಲಿದೆ ಎಂಬ ವಿಶ್ವಾಸವಿತ್ತು. ಆದರೆ, ಸಂಪುಟದಲ್ಲಿ ಯಾರಿಗೂ ಅವಕಾಶ ಸಿಗದಿದ್ದಕ್ಕೆ ಬೇಸರವಾಗಿದೆ. ಪ್ರತಿ ಜಿಲ್ಲೆಯಿಂದ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕಿತ್ತು.
-ಎಲ್.ನಾಗೇಂದ್ರ, ಶಾಸಕ, ಚಾಮರಾಜ ಕ್ಷೇತ್ರ ಈ ಬಾರಿಯೂ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿಯಬಲಗೈ ಸಮುದಾಯವನ್ನುಕಡೆಗಣಿಸಲಾಗಿದೆ. ಜಿಲ್ಲೆಯಲ್ಲಿ ಮೂವರು ಶಾಸಕರಿದ್ದೇವೆ.ಈ ಪೈಕಿ ಒಬ್ಬರಿಗೂ ಅವಕಾಶಕಲ್ಪಿಸಿಲ್ಲ.
-ಹರ್ಷವರ್ಧನ್, ಶಾಸಕ, ನಂಜನಗೂಡು -ಸತೀಶ್ ದೇಪುರ