ಮೈಸೂರು: ಜಮೀನಿಯೊಂದಕ್ಕೆ ಅಳವಡಿಸಲಾಗಿದ್ದ ಅಕ್ರಮ ವಿದ್ಯುತ್ ತಂತಿಯನ್ನು ಕಾಡಾನೆ ಸ್ಪರ್ಷಿಸಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮರಳುಕಟ್ಟೆ ಹಾಡಿಯಲ್ಲಿ ನಡೆದಿದೆ.
ಮರಳುಕಟ್ಟೆ ಹಾಡಿಯ ಗಿರಿಜನ ಮಣಿ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಆಹಾರ ಅರಸಿ ಬಂದ ಕಾಡಾನೆಯು ಜಮೀನಿನ ಸುತ್ತ ಹಾಕಿದ್ದ ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಸೆಸ್‌ಗೆ ಅರಣ್ಯ ಇಲಾಖೆಗೆ ಈ ಬಗ್ಗೆ ಪರಿಶೀಲಿಸುವಂತೆ ಪತ್ರ ನೀಡಿದ್ದರು. ಸೆಸ್ಕ್ ಎಇಇ ಗುರು ಬಸವರಾಜು ಪರಿಶೀಲಿಸಿ, ಆನೆ ಅಕ್ರಮ ವಿದ್ಯುತ್ ಗೆ ಬಲಿಯಾಗಿರುವುನ್ನು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ವನ್ಯಜೀವಿ ಪಶುವೈದ್ಯ ಚೆಟ್ಟಿಯಪ್ಪ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ವಿದ್ಯುತ್ ಶಾಕ್ ನಿಂದ ಆನೆ ಮೃತಪಟ್ಟಿರುವುದನ್ನು ಖಚಿತಪಡಿಸಿದರು.
ಮಣಿ ವಿರುದ್ಧ ಪೊಲೀಸ್ ಠಾಣೆಗೆ ಅರಣ್ಯ ಇಲಾಖೆ ದೂರು ನೀಡಿದೆ.