Advertisement
ಶೇ.80 ರಷ್ಟು ಮಳಿಗೆಗಳು ಭರ್ತಿ ಆಗುವ ಜತೆಗೆ ಎಲ್ಲಾ ಜಿಲ್ಲೆಗಳ ಜಿಪಂ ಮಳಿಗೆಗಳು ಭರ್ತಿಗಳು ತೆರೆದಿವೆ ಎನ್ನುವ ಮಾತನ್ನೂ ಹೇಳಿಕೊಂಡು ಬಂದಿದ್ದರೂ ಅರ್ಧಕ್ಕೆ ಅರ್ಧ ಮಳಿಗೆಗಳು ಖಾಲಿಯಾಗಿತ್ತು. ಮೇಲೆ ಥಳಕು-ಒಳಗೆ ಹುಳುಕು ಎನ್ನುವ ಗಾದೆ ಮಾತಿನಂತೆ ವಸ್ತುಪ್ರದರ್ಶನದ ಆವರಣದಲ್ಲಿ ವಿದ್ಯುತ್ ದೀಪಾಲಂಕಾರ, ತಳಿರು-ತೋರಣಗಳನ್ನು ಕಟ್ಟಿ ಸಿಂಗಾರ ಮಾಡಿದ್ದರೂ ಒಳಗೆ ಮಾತ್ರ ನೀರಸವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಬರಮಾಡಿಕೊಂಡರಲ್ಲದೆ, ಟೇಪು ಕತ್ತರಿಸಿ ಉದ್ಘಾಟಿಸಿದರು. ನಂತರ, ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ 90 ದಿನಗಳ ಕಾಲ ನಡೆಯಲಿರುವ ವಸ್ತು ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬೇಕು. ಈ ಬಾರಿಯ ವಸ್ತು ಪ್ರದರ್ಶನ ಹಲವಾರು ವಿಶೇಷತೆಗಳಿಂದ ಕೂಡಿರುವಂತೆ ಮಾಡಲಿದೆ ಎಂದರು.
Related Articles
Advertisement
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಉಪ ಮಹಾಪೌರ ಡಾ.ಜಿ.ರೂಪಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಎಚ್ .ಜಿ.ಗಿರಿಧರ್, ನಗರಪಾಲಿಕೆ ಸದಸ್ಯರಾದ ಕೆ.ಜೆ.ರಮೇಶ್, ಜಗದೀಶ್ ಹಾಜರಿದ್ದರು. ಹದಿನೈದು ದಿನಗಳು ಮುಂಚಿತವಾಗಿ ವಸ್ತು ಪ್ರದರ್ಶನ ಆರಂಭಿಸಬೇಕಿತ್ತಾದರೂ ಮಳೆಯ ಕಾರಣದಿಂದ ವಿಳಂಬವಾಯಿತು. ಈ ಬಾರಿ ತ್ರೀಡಿ ಮ್ಯಾಪಿಂಗ್, ವಿಡಿಯೋ ಮ್ಯಾಪಿಂಗ್, ನಟ ಪುನೀತ್ ರಾಜ್‌ಕುಮಾರ್ ,ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳ ಸ್ಯಾಂಡ್ ಮ್ಯೂಸಿಯಂ ಆಕರ್ಷಿಸಲಿದೆ.
● ಮಿರ್ಲೆ ಶ್ರೀನಿವಾಸಗೌಡ,
ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ.