Advertisement
ದಸರಾ ಉತ್ಸವಕ್ಕೆ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳನ್ನು ಕರೆತರಲು ನಿರ್ಧರಿಸಿರುವ ಅರಣ್ಯ ಇಲಾಖೆಯು ಮತ್ತಿಗೋಡು, ದುಬಾರೆ, ರಾಂಪುರ ಹಾಗೂ ಬಳ್ಳೆ ಸಾಕಾನೆ ಶಿಬಿರಗಳಿಗೆ ತೆರಳಿ ಒಂದು ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆಸಿದೆ. ಜತೆಗೆ ಗಜಪಯಣದ ಮೂಲಕ ಮೈಸೂರಿಗೆ ಕರೆತರುವ ಮೊದಲ ತಂಡದ ಆನೆಗಳ ಪಟ್ಟಿ ಸಿದ್ಧಪಡಿಸಿದೆ.
Related Articles
Advertisement
ಅಂದು ವೀರನಹೊಸಹಳ್ಳಿಯಿಂದ ಬರುವ ಗಜಪಡೆಯ ಮೊದಲ ತಂಡ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ 3 ದಿನಗಳ ಕಾಲ ತಂಗಲಿವೆ. ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದಲ್ಲಿ ಆರ್‌ಎಫ್ಒ ಸಂತೋಷ್‌ಹೂಗಾರ್, ಪಶುವೈದ್ಯರಾದ ಡಾ. ರಮೇಶ್ ಮತ್ತು ಡಾ.ಮುಜೀಬ್ ತಂಡ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಒಳಪಡುವ ಬಳ್ಳೆ, ಮತ್ತಿಗೋಡು, ದುಬಾರೆ ಆನೆ ಕ್ಯಾಂಪ್ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿರುವ ರಾಂಪುರ ಆನೆ ಶಿಬಿರಕ್ಕೆ ತೆರಳಿ ಅಂಬಾರಿ ಆನೆ ಅಭಿಮನ್ಯ ಸೇರಿ ದಸರಾ ಮಹೋತ್ಸವದಲ್ಲಿ ಕರೆತರಲು ಉದ್ದೇಶಿಸಿರುವ ಆನೆಗಳ ಸರ್ವಿಸ್ ಕಾರ್ಡ್ ಪರಿಶೀಲನೆ ನಡೆಸಿದ್ದಾರೆ. ಈ ಬಾರಿಯ ದಸರಾ ಮಹೋತ್ಸವ ಅ.15ರಿಂದ ಆರಂಭವಾಗಲಿದ್ದು, 24ರಂದು ಜಂಬೂಸವಾರಿ ನೆರವೇರಲಿದೆ.
8 ಆನೆಗಳು ಬರುವ ಸಾಧ್ಯತೆ:
ಈ ಬಾರಿಯ ಗಜಪಯಣದ ಮೂಲಕ ಮೊದಲ ತಂಡದಲ್ಲಿ 8 ಆನೆಗಳು ಬರುವ ಸಾಧ್ಯತೆಗಳಿದ್ದು, ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು, ಭೀಮ, ಮಹೇಂದ್ರ, ಲಕ್ಷ್ಮೀ ಮತ್ತು ವರಲಕ್ಷ್ಮೀ. ಹಾಗೆಯೇ ಬಳ್ಳೆಯಿಂದ ಮಾಜಿ ಕ್ಯಾಪ್ಟನ್ ಅರ್ಜುನ, ದುಬಾರೆಯಿಂದ ಧನಂಜಯ ಮತ್ತು ಗೋಪಿ ಆನೆ ಕರೆತರಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.