Advertisement
ಹುಣಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಗಳ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
Related Articles
Advertisement
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಇತಿಹಾಸವಿರುವ ಕಾಂಗ್ರೆಸ್ ಪಕ್ಷ ದೊಡ್ಡ ಆಲದ ಮರವಿದ್ದಂತೆ, ಎಲ್ಲ ಸಮುದಾಯಗಳೂ ಈ ಆಲದ ಮರದ ಕೆಳಗೆ ಆಶ್ರಯ ಪಡೆದಿದ್ದೇವೆ. ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಪಕ್ಷ ಇನ್ನಷ್ಟು ಸದೃಢವಾಗಲಿದೆ. ಈ ಸಾಲಿನ ಅಧಿಕಾರಾವಧಿಯಲ್ಲಿ ಸರ್ಕಾರದ ತಾರತಮ್ಯದಿಂದ ಹೆಚ್ಚು ಅನುದಾನ ಕೊಡದೆ ತಾಲೂಕಿನ ಅಭಿವೃದ್ಧಿ ವೇಗಕ್ಕೆ ಕಡಿವಾಣ ಹಾಕಿದಂತಾಗಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ನೇತƒತ್ವದ ಸರ್ಕಾರದಲ್ಲಿ ಬಡವರು, ಶೋಷಿತರು, ನಿರ್ಗತಿಕರು, ದಲಿತರಿಗೆ ನೀಡಿದ ಭಾಗ್ಯಗಳಿಗೆ ಅನುದಾನ ನೀಡದೆ ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯವರು ಮನೆ ಮನೆಗೆ ತೆರಳಿ ಸರ್ಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಸಂಘಟನೆಗೆ ಸಮಯ ಮೀಸಲಿಡಬಢಕು. ಆಮೂಲಕ ಮತ್ತೂಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಪಣತೊಡಬೇಕೆಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಗೀತಾ ನಿಂಗರಾಜ್, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಕೋಟೆ ಮಲ್ಲೇಶ್, ತಾಲೂಕು ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಕೆಂಪರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನಾರಾಯಣ, ಕಲ್ಕುಣಿಕೆ ರಮೇಶ್, ದೇವರಾಜ್, ಡಿಸಿಸಿ ಉಪಾಧ್ಯಕ್ಷ ಎಡತಲೆ ಮಂಜಣ್ಣ, ಮಾಜಿ ಅಧ್ಯಕ್ಷ ಬಿಳಿಕೆರೆಬಸವರಾಜ್, ಉದ್ಯಮಿ ಎಚ್ .ಪಿ.ಅಮರನಾಥ್, ನಾಡಪ್ಪನಹಳ್ಳಿ ರಾಜು ಶಿವರಾಜೇ ಗೌಡ, ಗುಂಡರವಿ, ಅಜ್ಗರ್‌ಪಾಷಾ, ಕಲ್ಕುಣಿಕೆ ರಾಘು, ಹಗರನಹಳ್ಳಿ ಕುಮಾರ್, ಬಸವರಾಜಪ್ಪ, ಕುಮಾರ ಸ್ವಾಮಿ, ರಾಜೇಗೌಡ, ನಟರಾಜ್, ಶರವಣ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.