ಮೈಸೂರು: ಜಿಲ್ಲೆಯಲ್ಲಿ ಕೋವಿಡ್ 19 ವೈರಾಣು ಸಮರ್ಪಕವಾಗಿ ನಿಯಂತ್ರಿಸಿದ್ದ ಜಿಲ್ಲಾಡಳಿತಕ್ಕೆ, ಬೆಂಗಳೂರಿನಿಂದ ಬಂದ ಇಬ್ಬರು ಮಹಿಳೆಯರಲ್ಲಿ ಸೋಂಕು ದೃಢಪಟ್ಟಿರುವುದು ಹೊಸ ತಲೆನೋವಾಗಿ ಪರಿಣಮಿಸಿದೆ. ಹೋಂಕ್ವಾರಂಟೈನ್‌ನಲ್ಲಿದ್ದ ತಾಯಿ-ಮಗಳು ನಿಯಮ ಉಲ್ಲಂ ಸಿ ಬೆಂಗಳೂರಿನಿಂದ ಮೈಸೂರಿಗೆ ಮಂಗಳವಾರ ಆಗಮಿಸಿದ್ದರು. ಬುಧವಾರ ಈ ಇಬ್ಬರಲ್ಲೂ ಸೋಂಕು ದೃಢ ಪಟ್ಟಿದೆ. ಅಧಿಕಾರಿಗಳು ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ದು, ಅವರಿದ್ದ ಬಡಾವಣೆಯ ಎರಡು ರಸ್ತೆಗಳನ್ನು ಸೀಲ್‌ಡೌನ್ ಮಾಡಿದ್ದಾರೆ.
ಘಟನೆ ವಿವರ: ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ತಾಯಿ, ಮಗಳು, ಅಳಿಯನನ್ನು ಅಲ್ಲಿಯೇ ಸ್ವಾéಬ್‌ಟೆಸ್ಟ್ ಮಾಡಿ ಕ್ವಾರಂಟೈನ್ ನಲ್ಲಿ ಇರುವಂತೆ ಅಧಿಕಾರಿಗಳು ಸೂಚಿದ್ದರು. ಆದರೆ ಮಗಳು ಗರ್ಭಿಣಿಯಾದ್ದರಿಂದ ಮೂವರು ಬೆಂಗಳೂರಿನ ಮನೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದರು. ಬಳಿಕ ಬುಧವಾರ ಬೆಳಗ್ಗೆ ಸ್ವಾéಬ್‌ಟೆಸ್ಟ್ ಫಲಿತಾಂಶದಲ್ಲಿ ಮೂವರಿಗೂ ಸೋಂಕಿರುವುದು ದೃಢಪಟ್ಟ ಹಿನ್ನೆಲೆ ಅಧಿಕಾರಿಗಳು ಮನೆಗೆ ತೆರಳಿದ್ದಾರೆ. ಆದರೆ ಮಂಗಳವಾರ ತಾಯಿ ಮತ್ತು ಗರ್ಭಿಣಿ ಮಗಳು ಇಬ್ಬರು ಮೈಸೂರಿನ ರಾಮಕೃಷ್ಣ ನಗರ ದ ತಮ್ಮ ನಿವಾಸಕ್ಕೆ ಅಧಿಕಾರಿಗಳ ಅನುಮತಿ ಪಡೆಯದೇ ಕದ್ದು ಬಂದಿದ್ದಾರೆನ್ನಲಾಗಿದೆ.
ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ: ಕೂಡಲೇ ಕಾರ್ಯಪ್ರವೃತ್ತರಾದ ಬೆಂಗಳೂರಿನ ಅಧಿಕಾರಿಗಳು ಮೈಸೂರು ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಮೈಸೂರು ಜಿಲ್ಲಾಡಳಿತ ಸೋಂಕಿತರ ಮನೆಯನ್ನು ಪತ್ತೆಹಚ್ಚಿ, ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿ ಸಿದ್ದಾರೆ. ಜೊತೆಗೆ ಅವರಿದ್ದ ರಾಮ ಕೃಷ್ಣ ನಗರದ ಜಿ.ಬ್ಲಾಕ್‌ನ ಎರಡು ಮುಖ್ಯ ರಸ್ತೆಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಿದ್ದಾರೆ.
ಟ್ರಾವೆಲ್ ಹಿಸ್ಟರಿ: ಅಧಿಕಾರಿಗಳ ಅನುಮತಿ ಪಡೆಯದೇ ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಮೈಸೂರಿಗೆ ಬಂದ ಈ ಸೋಂಕಿತರು ನಗರದ ಹಲವೆಡೆ ಓಡಾಡಿದ್ದು, ಬಡಾವಣೆಯ ಉದ್ಯಾನದಲ್ಲಿ ವಾಯುವಿಹಾರಕ್ಕೆ ತೆರಳಿ ಸ್ನೇಹಿತರೊಂದಿಗೆ ಮಾತಾಡಿದ್ದಾರೆ. ಈ ಹಿನ್ನೆಲೆ ಇಬ್ಬರ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಜೊತೆಗೆ ಬೆಂಗಳೂರಿನಿಂದ ಕರೆತಂದ ಕಾರು ಚಾಲಕ ದೊಡ್ಡಬಳ್ಳಾಪುರದವನೆಂದು ಗುರುತಿಸಿದ್ದು, ಆತನನ್ನು ಸಂಪರ್ಕಿಸಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಸೀಲ್ ಡೌನ್ ಮಾಡಿರುವ ಎರಡೂ ರಸ್ತೆಯಲ್ಲಿನ ಮನೆಯವರು ಹೊರ ಹೋಗದಂತೆ ಹಾಗೂ ಹೊರಗಿನವರು ಆ ಪ್ರದೇಶಕ್ಕೆ ತೆರಳದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.
ಮುಂಬೈನಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್‌ನಲ್ಲಿದ್ದ ಇಬ್ಬರು ಮಹಿಳೆಯರು ಮಾಹಿತಿ ನೀಡದೇ ಮೈಸೂರಿಗೆ ಬಂದಿದ್ದು, ಅವರಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಸಕ್ರಿಯ ಸೋಂಕಿತರ ಸಂಖ್ಯೆ 6ಕ್ಕೇರಿಕೆಯಾಗಿದೆ. ಸೋಂಕಿತರು ವಾಸವಿದ್ದ ರಾಮಕೃಷ್ಣನಗರದ ಜಿ.ಬ್ಲಾಕ್‌ನ 70 ಮನೆಗಳ ಒಂದು ಭಾಗ ಕಂಟೈನ್ಮೆಂಟ್ ಜೋನ್ ಘೋಷಿಸಲಾಗಿದೆ.
-ಅಭಿರಾಂ ಜಿ.ಶಂಕರ್, ಜಿಲ್ಲಾಧಿಕಾರಿ