ಮೈಸೂರು: ಬಿಜೆಪಿ ಆರ್ ಎಸ್ಎಸ್ ತಾಲಿಬಾನ್ ಸಂಸ್ಕೃತಿಯವರು ಎಂದು ಹೇಳಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಹೇಳಿಕೆ ಖಂಡಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕಲು ಯತ್ನ ನಡೆಸಲಾಯಿತು.
ಬಿಜೆಪಿ ಕಚೇರಿಯಿಂದ ದೇವರಾಜ ಮೊಹಲ್ಲಾದ ಕಾಂಗ್ರೆಸ್ ಕಚೇರಿವರೆಗೂ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಈ ವೇಳೆ ಬಿಜೆಪಿ ಸದಸ್ಯರನ್ನು ತಡೆದ ಪೊಲೀಸರು ಬಂಧಿಸಿದರು.
ಇದನ್ನೂ ಓದಿ:ಹೊಸ ಡಿಜಿಟಲೀಕರಣ ನೀತಿ ಹಾಗೂ ಆರ್ ಆ್ಯಂಡ್ ಡಿ ಪಾಲಿಸಿ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ
ಶಾಸಕ ನಾಗೇಂದ್ರ, ಯುವಮೋರ್ಚಾ ಮುಖಂಡ ಧೀರಜ್, ಚಾಮರಾಜನಗರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್ ಪ್ರತಿಭಟನೆಯಲ್ಲಿ ಭಾಗಿಯಾದ್ದರು. ಮೆಟ್ರೋಪೋಲ್ ಬಳಿ ಬಂದ ಬಿಜೆಪಿ ಕಾರ್ಯಕರ್ತರನ್ನು ರಸ್ತೆಗೆ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು.
ಬ್ಯಾರಿಕೇಟ್ ತಳ್ಳಿ ಮುನ್ನುಗ್ಗಲು ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಪೊಲೀಸರನ್ನು ತಪ್ಪಿಸಿ ಹೊರಟಿದ್ದ ಕಾರ್ಯಕರ್ತನನ್ನು ಪೊಲೀಸರು ಧಾವಿಸಿ ಹಿಡಿದರು.50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.