ಹುಬ್ಬಳ್ಳಿ: ಬೆಳಗಾವಿ-ಸುಲಧಾಳ ವಿಭಾಗ ನಡುವೆ ನಡೆಯುತ್ತಿರುವ ಜೋಡು ಮಾರ್ಗ ಕಾಮಗಾರಿ ನಿಮಿತ್ತ ವಿಶ್ವಮಾನವ ನಿತ್ಯ ಸಂಚಾರ ಎಕ್ಸ್‌ಪ್ರೆಸ್ ರೈಲು ಭಾಗಶಃ ರದ್ದುಗೊಳಿಸಲಾಗಿದೆ. ಜೂ.22ರಿಂದ 28ರ ವರೆಗೆ ಮೈಸೂರು-ಬೆಳಗಾವಿ ವಿಶ್ವಮಾನವ ನಿತ್ಯ ಸಂಚಾರ ಎಕ್ಸ್‌ಪ್ರೆಸ್ (17326) ರೈಲು ಧಾರವಾಡ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಬೆಳಗಾವಿ ಬದಲು ಧಾರವಾಡಕ್ಕೆ ಕೊನೆಗೊಳ್ಳಲಿದೆ.
23ರಿಂದ 29ರ ವರೆಗೆ ಬೆಳಗಾವಿ-ಮೈಸೂರು (17325) ರೈಲು ಬೆಳಗಾವಿ ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಬೆಳಗಾವಿ ಬದಲು ಧಾರವಾಡದಿಂದ ಹೊರಡಲಿದೆ.
ಹೆಚ್ಚುವರಿ ಬೋಗಿ ಅಳವಡಿಕೆ: ನೈಋತ್ಯ ರೈಲ್ವೆಯು ಎಂಟು ರೈಲುಗಳಿಗೆ ಹೆಚ್ಚುವರಿಯಾಗಿ ಶಾಶ್ವತ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ.
ಜೂ. 19ರಿಂದ ಬೆಂಗಳೂರು-ಚೆನ್ನೈ ಸೆಂಟ್ರಲ್-ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ (12028/12027) ರೈಲಿಗೆ ಒಂದು ಎಸಿ ಚೇರ್ ಹಾಗೂ 20ರಿಂದ ಯಶವಂತ ಪುರ-ಶಿವಮೊಗ್ಗ ಟೌನ್-ಯಶವಂತಪುರ ಡೇಲಿ ಎಕ್ಸ್‌ಪ್ರೆಸ್ (16579/15580) ಗೆ ಎರಡು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಬೆಳಗಾವಿ- ಮೈಸೂರು-ಬೆಳಗಾವಿ ವಿಶ್ವಮಾನವ ಡೇಲಿ ಎಕ್ಸ್‌ಪ್ರೆಸ್ (17325/17326)ಗೆ ಒಂದು ದ್ವಿತೀಯ ದರ್ಜೆ ಚೇರ್ ಕಾರ್ ಹಾಗೂ 21ರಿಂದ ಬೆಂಗಳೂರು-ಶಿವಮೊಗ್ಗ ಟೌನ್-ಬೆಂಗಳೂರು ಡೇಲಿ ಜನಶತಾಬ್ದಿ ಎಕ್ಸ್‌ಪ್ರೆಸ್ (12089/12090)ಗೆ ಎರಡು ದ್ವಿತೀಯ ದರ್ಜೆ ಚೇರ್ ಕಾರ್
23ರಿಂದ ಯಶವಂತಪುರ-ಕೊ ಚಿವೇಲಿ-ಯಶವಂತಪುರ ವೀಕ್ಲಿ ಸುಪರ್ ಫಾಸ್ಟ್ ಎಕ್ಸ್ ಪ್ರಸ್ (22677/22678) ಗೆ ಒಂದು ಎಸಿ-3 ಟೈರ್ ಹಾಗೂ 25ರಿಂದ ಯಶವಂತಪುರ-ದೆಹಲಿ ಸರಾಇ ರೋಹಿಲ್ಲಾ-ಯಶವಂತಪುರ ವೀಕ್ಲಿ ಡುರೊಂಟೊ ಎಕ್ಸ್‌ಪ್ರೆಸ್ (12213/12214) ಗೆ ಒಂದು ಎಸಿ-3 ಟೈರ್ ಹಾಗೂ 27ರಿಂದ ಯಶವಂತಪುರ-ಶಿವಮೊಗ್ಗ ಟೌನ್ -ಯಶವಂತಪುರ ಟ್ರಿ-ವೀಕ್ಲಿ ಎಕ್ಸ್ ಪ್ರೆಸ್ (16581/16582)ಗೆ ಎರಡು ದ್ವಿತೀಯ ದರ್ಜೆ ಸ್ಲಿಪರ್ ಹಾಗೂ ಜು. 4ರಿಂದ ವಾಸ್ಕೊ ಡಾ ಗಾಮಾ-ನಾಗಪಟ್ಟಣಂ-ವಾಸ್ಕೊ ಡಾ ಗಾಮಾ ವೀಕ್ಲಿ ಎಕ್ ಪ್ರೆಸ್ (17315/17316)ಗೆ ಒಂದು ದ್ವಿತೀಯ ದರ್ಜೆ ಸ್ಲಿಪರ್ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ.