Advertisement

ಮೈಸೂರು ಕೋವಿಡ್ ಸೋಂಕು ಮುಕ್ತ ; ಎಲ್ಲಾ 90 ಸೋಂಕಿತರು ಗುಣಮುಖ

08:22 AM May 16, 2020 | Hari Prasad |

ಮೈಸೂರು: ಮಹಾಮಾರಿ ಕೋವಿಡ್ ವೈರಸ್ ಗೆ ತುತ್ತಾಗಿ ತತ್ತರಿಸಿದ್ದ ಸಾಂಸ್ಕ್ರತಿಕ ನಗರಿ ಮೈಸೂರು ಸೋಂಕಿನಿಂದ ಮುಕ್ತವಾಗಿದ್ದು, ಎಲ್ಲಾ 90 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ಈ ಹಿಂದೆ 88 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಶುಕ್ರವಾರ ಉಳಿದ ಇಬ್ಬರು ಗುಣಮುಖರಾಗಿದ್ದು ಜಿಲ್ಲೆಯ ಜನರಲ್ಲಿದ್ದ ಕೋವಿಡ್ ಆತಂಕ ಸದ್ಯಕ್ಕೆ ದೂರವಾದಂತಾಗಿದೆ.

ರಾಜ್ಯದಲ್ಲಿ ಬೆಂಗಳೂರು ಬಳಿಕ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು ಮೈಸೂರಿನಲ್ಲಿ. ಹೆಚ್ಚು ಸೋಂಕಿತರನ್ನು ಹೊಂದಿದ್ದ ಜಿಲ್ಲೆಗಳಲ್ಲಿ ಮೈಸೂರು 2ನೇ ಸ್ಥಾನದಲ್ಲಿತ್ತು. 90 ಮಂದಿಗೆ ಸೋಂಕು ತಗುಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ ನಲ್ಲಿ ಇದ್ದರು.

ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಅಧಿಕಾರಿಗಳ ಅವಿರತ ಶ್ರಮದಿಂದ ಜಿಲ್ಲೆ ಕೋವಿಡ್ ಸೋಂಕಿನಿಂದ ಮುಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next