ಮುಂಬಯಿ: ಮೈಸೂರು ಅಸೋಸಿಯೇಶನ್ ಮುಂಬಯಿ ಇದರ 90ನೇ ಹುಟ್ಟು ಹಬ್ಬದ ನಿಮಿತ್ತವಾಗಿ 2016 ರಿಂದ ಆರಂಭಿಸಿದ ನೇಸರು ಜಾಗತಿಕ ಕನ್ನಡ ಕವನ ಸ್ಪರ್ಧೆ’ಯ ಎರಡನೆ ವರ್ಷದ ಕವನ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಹಾಗೂ ನೇಸರು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಮಾಟುಂಗ ಪೂರ್ವದ ಮೈಸೂರು ಅಸೋಸಿ ಯೇಶನ್ ಸಭಾಗೃಹದಲ್ಲಿ ಜೂ. 24ರಂದು ಸಂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷರಾದ ಮನು ಬಳಿಗಾರ್ ಅವರು ನೇಸರು ವಾರ್ಷಿಕ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ವಿಶೇಷ ಅತಿಥಿಯಾಗಿ ಕನ್ನಡದ ಖ್ಯಾತ ಲೇಖಕರಾದ ಡಾ| ಜಯಂತ್ ಕಾಯ್ಕಿಣಿ, ಮುಂಬಯಿಯ ಖ್ಯಾತ ಸಾಹಿತಿ ಡಾ| ಸುನೀತಾ ಶೆಟ್ಟಿ ಅವರುಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮೈಸೂರು ಅಸೋಸಿಯೇಶನ್‌ನ ಅಧ್ಯಕ್ಷೆ ಕೆ. ಕಮಲಾ ಅವರು ವಹಿಸಿದ್ದರು. ಎನ್‌ಕೆಇಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎರಡನೇ ಜಾಗತಿಕ ಕವನ ಸ್ಪರ್ಧೆ- 2017ರ ಮೊದಲ ಬಹುಮಾನ ವಿಜೇತರಾದ ಗುರುರಾಜ್ ಬೆಂಗ ಳೂರು, ರೇಣುಕಾ ರಮಾನಂದ ಅಂಕೋಲಾ, ದ್ವಿತೀಯ ಬಹುಮಾನ ವಿಜೇತರಾದ ವಿನಾಯಕ ಅರಳಸುರಳಿ, ಶುಭಾ ಎ. ಆರ್., ತೃತೀಯ ಬಹು ಮಾನ ವಿಜೇತರಾದ ಮುಸ್ತಾಪ ಕೆ. ಎಚ್. ಜಿ. ಕೆ. ಕುಲಕರ್ಣಿ, ಪ್ರೋತ್ಸಾಹ ಬಹುಮಾನ ವಿಜೇತೆ ಶಾಂತಿ ಜೆ. ಶೆಟ್ಟಿ ಅವರಿಗೆ ಬಹುಮಾನ ನೀಡಿ, ಶಾಲು ಹೊದೆಸಿ, ಪುಷ್ಪ$ಗೌರವ ಕೊಟ್ಟು ಸಮ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮೈಸೂರು ಅಸೋಸಿಯೇಶನ್ ಪದಾಧಿಕಾರಿ ಕೆ. ಮಂಜುನಾಥಯ್ಯ ಮಾತನಾ ಡಿದರು. ನೇಸರು ಪತ್ರಿಕೆಯ ಸಂಪಾದಕಿ ಡಾ| ಜ್ಯೋತಿ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು. ಮೈಸೂರು ಅಸೋಸಿಯೇಶನ್‌ನ ಸದಸ್ಯ ಪದ್ಮನಾಭ ಸಿದ್ಧಕಟ್ಟೆ ಪ್ರಾರ್ಥನೆಗೈದರು. ಮಂಜುನಾಥಯ್ಯ ವಂದಿಸಿದರು.
ಚಿತ್ರ: ಸುಭಾಷ್ ಶಿರಿಯಾ