Advertisement

ಮೃಗಾಲಯಕ್ಕೆ ಸಚಿವರ ದೇಣಿಗೆ

02:49 PM May 09, 2020 | mahesh |

ಮೈಸೂರು: ಮೃಗಾಲಯಕ್ಕೆ ದೇಣಿಗೆ ನೀಡುವಂತೆ ಇನ್ಫೋಸಿಸ್‌ ಫೌಂಡೇಶನ್‌ ಟ್ರಸ್ಟ್‌ನ ಡಾ. ಸುಧಾಮೂರ್ತಿ ಅವರಿಗೆ ಪತ್ರ ಬರೆದಿದ್ದೆ. ಅದಕ್ಕೆ ಪ್ರತಿಯಾಗಿ ಪತ್ರ ಬರೆದು 20 ಲಕ್ಷ ರೂ. ಕೊಡುವುದಾಗಿ ಹೇಳಿದ್ದಾರೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು. ಸುದ್ಧಿಗಾರರೊಂದಿಗೆ ಮಾತನಾಡಿ, ಅನಿವಾಸಿ ಭಾರತೀಯರು ಹಾಗೂ ಅಕ್ಕಸಂಸ್ಥೆಗೂ ಕೇಳಿಕೊಂಡಿದ್ದು, ಅವರಿಂದಲೂ ದೇಣಿಗೆ ಸಿಗುವ ನಿರೀಕ್ಷೆ ಇದೆ. ಸಂಪುಟ ಸಹದ್ಯೋಗಿಗಳು, ಶಾಸಕರಿಗೆ ಮನವಿ ಮಾಡಿದ್ದೇನೆ. ಮೃಗಾಲಯ ಸಂಕಷ್ಟದಲ್ಲಿರುವ ಕಾರಣ ನೆರವಿಗೆ ನಿಲ್ಲುವಂತೆ ಮಾಡಿದ ಮನವಿಗೆ ಅನೇಕರು ದೇಣಿಗೆ ನೀಡಲು ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಚರ್ಚಿಸಿ ತೀರ್ಮಾನ: ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಮಾತನಾಡಿ, ಮೈಸೂರು ನಗರ ಪಾಲಿಕೆಯಲ್ಲಿ ಹಲವು ವರ್ಷದಿಂದ ಬಾಕಿ ಇರುವ ಕುಡಿಯುವ ನೀರಿನ ಬಡ್ಡಿ ಮನ್ನಾ ಮಾಡುವಂತೆ ನಗರಪಾಲಿಕೆ ಸದಸ್ಯರು ಮನವಿ ಮಾಡಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳ ಲಾಗುವುದು. ಕುಡಿಯುವ ನೀರಿನ ಬಿಲ್‌ ಪಾವತಿಸಲು ಮೂರು ತಿಂಗಳ ಸಮಯಾವಕಾಶ ನೀಡಲಾಗಿದ್ದು, ಗ್ರಾಹಕರ ಮೇಲೆ ಒತ್ತಡ ಹೇರದಂತೆ ಸೂಚಿಸಲಾಗಿದೆ ಎಂದು  ಹೇಳಿದರು.

ನೀರಿನ ಬಿಲ್‌ ಮನ್ನಾ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ. ಆದರೆ, ಬಡ್ಡಿ ಮನ್ನಾ ಬಗ್ಗೆ ಸದಸ್ಯರು ಪ್ರಸ್ತಾಪ ಮಾಡಿದ್ದರಿಂದ ಚರ್ಚೆ ನಡೆಸಬೇಕಾಗಿದೆ. ಬಡ್ಡಿ ಮನ್ನಾ ಕುರಿತು ಹಿರಿಯ ಅಧಿಕಾರಿಗಳ ಸಭೆ ಕರೆದು ಸಾಧಕ- ಬಾಧಕ ಬಗ್ಗೆ ಚರ್ಚಿಸಿದ ಬಳಿಕ ನಿರ್ಧರಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next