Advertisement

ಮೈರ: ಕಾರುಗಳೆರಡು ಮುಖಾಮುಖಿ  ಢಿಕ್ಕಿ, ಗಾಯ

12:56 PM May 15, 2018 | |

ಕೇಪು : ಕಲ್ಲಡ್ಕ-ಕಾಂಞಂಗಾಡ್‌ ಅಂತಾರಾಜ್ಯ ಹೆದ್ದಾರಿಯ, ಕೇಪು ಗ್ರಾಮದ ಮೈರದಲ್ಲಿ ಎರಡು ಕಾರುಗಳ ನಡುವೆ
ಮುಖಾಮುಖಿ  ಢಿಕ್ಕಿಯಾಗಿ, ಓರ್ವರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ವಿಟ್ಲದಿಂದ ಅಡ್ಯನಡ್ಕಕ್ಕೆ ತೆರಳುತ್ತಿದ್ದ ಸ್ವಿಫ್ಟ್‌ ಕಾರು ಮತ್ತು ವಿಟ್ಲಕ್ಕೆ ಆಗಮಿಸುತ್ತಿದ್ದ ರಿಟ್ಜ್ ಕಾರುಗಳ ನಡುವೆ ಈ ಅಪಘಾತ ಸಂಭವಿಸಿದೆ. ಅಗಲ ಕಿರಿದಾದ ರಸ್ತೆ ಮತ್ತು ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣವೆನ್ನಲಾಗಿದೆ.

Advertisement

ಇದು ಅಂತಾರಾಜ್ಯ ಹೆದ್ದಾರಿಯಾಗಿದ್ದರೂ ಮೈರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಇಲ್ಲಿ ಈ ಹಿಂದೆ ಬೈಕ್‌ ಅಪಘಾತ ಸಂಭವಿಸಿ, ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು ಮತ್ತು ಇದು ಆಗಾಗ ಅಪಘಾತ ಸಂಭವಿಸುವ ಜಾಗವಾಗಿದ್ದು, ಇಲಾಖೆ ಸೂಕ್ತ ಸೂಚನೆ ಫಲಕವನ್ನು ಅಳವಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next