ಮೈಸೂರು: ಸಹಕಾರ ಕ್ಷೇತ್ರದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಿಟಿಡಿಗೆ ಸಡ್ಡು ಹೊಡೆದು ಮೈಮುಲ್ ಚುನಾವಣೆಯಲ್ಲಿ ಸಾ.ರಾ. ಮಹೇಶ್ ಕೈ ಬಲಪಡಿಸಲು ಮುಂದಾಗಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರಂಭದಲ್ಲೇ ನಿರಾಸೆಯಾಗಿದ್ದು, ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿದ್ದ ಎಚ್‌ಡಿಕೆಗೆ ಸಿದ್ದರಾಮಯ್ಯನವರ ಹೇಳಿಕೆ ಮುಖಭಂಗಕ್ಕೀಡುಮಾಡಿದೆ.
ಪಕ್ಷದಿಂದ ದೂರವಾಗುತ್ತಿರುವ ಶಾಸಕ ಜಿ.ಟಿ. ದೇವೇಗೌಡರ ಶಕ್ತಿ ಕುಂದಿಸಿ ಸಾ.ರಾ. ಮಹೇಶ್ ಕೈ ಬಲಪಡಿಸಲು ಕಾಂಗ್ರೆಸ್ ಬೆಂಬಲದ ನಿರೀಕ್ಷೆಯೊಂದಿಗೆ ಮೊದಲ ಬಾರಿಗೆ ಮೈಮುಲ್ ಚುನಾವಣಾ ಪ್ರಚಾರದ ಅಖಾಡಕ್ಕಿಳಿದಿದ್ದ ಕುಮಾರಸ್ವಾಮಿಗೆ ಚುನಾವಣೆ ಒಂದು ದಿನ ಬಾಕಿ ಇರುವಾಗಲೇ ಮುಖಭಂಗವಾಗಿದೆ.
ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಂತೆಯೇ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದ ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಕ್ಕರ್ ನೀಡಿದ್ದು, ಮೈಮುಲ್‌ಚುನಾವಣೆ ಮಾತ್ರವಲ್ಲ ಭವಿಷ್ಯದಲ್ಲಿ ಯಾವುದೇ ಚುನಾವಣಾ ರಂಗದಲ್ಲೂ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿರುವುದು ಎಚ್‌ಡಿಕೆ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಇದರಿಂದಾಗಿ ಕುಮಾರಸ್ವಾಮಿ ಮುಖಭಂಗ ಅನುಭವಿಸುವಂತಾಗಿದೆ.
ಆರಂಭದಲ್ಲೇ ಹಿನ್ನಡೆ: ಜಿಲ್ಲೆಯಲ್ಲಿ ಜೆಡಿಎಸ್ ಹಿಡಿತವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿರುವ ಶಾಸಕ ಸಾರಾ ಮಹೇಶ್‌ಗೆ ತಮ್ಮ ಸ್ವಕ್ಷೇತ್ರ ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣದಲ್ಲಿಸ್ವಪಕ್ಷಿಯರಿಂದಲೇ ವಿರೋಧ ವ್ಯಕ್ತವಾಗಿದೆ. ಇತ ¤ ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿದ್ದ ಸಾರಾ ಮತ್ತುಎಚ್‌ಡಿಕೆಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ನಿರಾಸೆಗೊಳಿಸಿದೆ. ಮಂಗಳವಾರ ಮೈಸೂರು ಜಿಲ್ಲಾ ಹಾಲುಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ(ಮೈಮು ಲ್) ಆಡಳಿತ ಮಂಡಳಿಯ 15 ನಿರ್ದೇಶಕಸ್ಥಾನ ಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಶಾಸಕಜಿ.ಟಿ. ದೇವೇಗೌಡ ತಮ್ಮ ಅಭ್ಯರ್ಥಿಗಳನ್ನು ಹೆಚ್ಚುಸಂಖ್ಯೆ ಯಲ್ಲಿ ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಅಖಾಡಕ್ಕಿಳಿದಿರುವುದು ಒಂದೆಡೆಯಾದರೆ, ಮೈಮುಲ್ ಚುನಾವಣೆ ಮೂಲಕ ಜಿಟಿಡಿಯನ್ನು ಮಣಿಸಬೇಕು ಎಂದು ಶಾಸಕ ಸಾ.ರಾ. ಮಹೇಶ್ ಯತ್ನಕ್ಕೆ ಖುದ್ದು ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲವಾಗಿ ನಿಂತಿದ್ದು, ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಅಲ್ಲದೇ ತಮ್ಮ ಸಹೋದರ ಎಚ್.ಡಿ. ರೇವಣ್ಣ ಅವರನ್ನು ಹುಣಸೂರು ವಿಭಾಗಕ್ಕೆ ನಿಯೋ ಜಿಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
ತಮ್ಮದೇ ಪಕ್ಷದ ನಾಯಕರಾದ ಕುಮಾರಸ್ವಾಮಿ, ರೇವಣ್ಣ ಹಾಗೂ ಸಾ.ರಾ. ವಿರುದ್ಧ ತಂತ್ರ ರೂಪಿಸಿರುವ ಜಿಟಿಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಹಕಾರ ಧುರೀಣ ಎಂದೇ ಹೆಸರು ಮಾಡಿರುವ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಬೆಂಬಲದೊಂದಿಗೆ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಒಟ್ಟಾರೆ ಈ ಬಾರಿಯ ಮೈಮುಲ್ ಚುನಾವಣೆಯಲ್ಲಿ ಜಿಟಿಡಿ ಬೆಂಬಲಿತರು ವರ್ಸಸ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದರೂ ಎಚ್ ಡಿಕೆ ಹಾಗೂ ಜಿಟಿಡಿ ನಡುವಿನ ಹೋರಾಟ ಎಂದೇ ಬಿಂಬಿತವಾಗಿದೆ.