Advertisement

ಮೈಲಾರ ಕಾರ್ಣಿಕ: ನಡೆಯದ ಕಂಕಣ ಕಟ್ಟುವ ಕಾರ್ಯ

11:30 PM Feb 01, 2020 | Lakshmi GovindaRaj |

ಹೂವಿನಹಡಗಲಿ: ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಕಾರ್ಣಿಕದ ಗೊರವಯ್ಯ-ಬಾಬುದಾರರಿಗೆ ಕಂಕಣ ಕಟ್ಟುವ ಧಾರ್ಮಿಕ ಕಾರ್ಯಕ್ರಮ ರಥಸಪ್ತಮಿ ದಿನವಾದ ಶನಿವಾರ ನಡೆಯದ ಕಾರಣ ಭಕ್ತರಲ್ಲಿ ಆತಂಕ ಮನೆ ಮಾಡಿದೆ.

Advertisement

ಫೆ.11ರಂದು ಕಾರ್ಣಿಕೋತ್ಸವ ಜರುಗಲಿದ್ದು, ಇದರ ಅಂಗವಾಗಿ ದೇವಸ್ಥಾನ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕವಾಗಿ ಹಾಲು ಉಕ್ಕಿಸುವುದು, ಕಾರ್ಣಿಕ ನುಡಿಯುವ ಕಾರ್ಣಿಕದ ಗೊರವಯ್ಯ ಒಳಗೊಂಡಂತೆ ಇತರ ಬಾಬುದಾರರಿಗೆ ಕಂಕಣ ಕಟ್ಟುವ ಧಾರ್ಮಿಕ ಕಾರ್ಯಕ್ರಮವನ್ನು ಧರ್ಮಕತೃ ಗುರು ವೆಂಕಪ್ಪಯ್ಯ ಒಡೆಯರ್‌ ಅವರು ವಂಶಪಾರಂಪರ್ಯವಾಗಿ ನೆರವೇರಿಸುತ್ತ ಬಂದಿದ್ದಾರೆ. ಆದರೆ ಶನಿವಾರ ಅವರು ಈ ಕಾರ್ಯ ನೆರವೇರಿಸಲು ಬರಲೇ ಇಲ್ಲ.

ಇದರಿಂದ ದೇವಸ್ಥಾನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಸಮಸ್ಯೆ ಬಗೆಹರಿಸಲು ದೇವಸ್ಥಾನ ಕಮಿಟಿ ಸಹಾಯಕ ನಿರ್ದೇಶಕರಿಂದ ಗುರು ವೆಂಕಪ್ಪಯ್ಯ ಒಡೆಯರ್‌ ಅವರ ಮನವೊಲಿಸುವ ಕಾರ್ಯ ನಡೆದರೂ ಪ್ರತಿಕ್ರಿಯೆ ಬಾರದ ಕಾರಣ ತಹಶೀಲ್ದಾರ್‌ ಕೆ.ರಾಘವೇಂದ್ರರಾವ್‌ ಅವರು ಮೈಲಾರಕ್ಕೆ ಭೇಟಿ ನೀಡಿ ಚರ್ಚಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next