ಈವರೆಗೆ 262 ಪ್ರಕರಣಗಳು ವರದಿಯಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕು ಪೀಡಿತರಲ್ಲಿ ಹೆಚ್ಚಿನವರು ರೊಹಿಂಗ್ಯಾ ಸಮುದಾಯದವರಾಗಿದ್ದು, ಇವರಿಗೆಲ್ಲ ಹೊರಗಿನಿಂದಲೇ ಸೋಂಕು ಬಂದಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
Advertisement
ಮ್ಯಾನ್ಮಾರ್, ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿದ್ದು, ಅಲ್ಲಿಂದ ಬಂದವರೇ ಈಗ ಕೋವಿಡ್ ಸೋಂಕು ಹರಡಲು ಕಾರಣವಾಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕೆಲವರು ಅಕ್ರಮ ವಾಗಿಯೂ ಬಂದಿರಬಹುದು ಎನ್ನುವುದು ಅವರ ಆರೋಪ. ಇನ್ನು ಒಟ್ಟು ಸೋಂಕಿತರಲ್ಲಿ ಮೂರನೇ ಒಂದರಷ್ಟು ಪಾಲು ರೊಹಿಂಗ್ಯಾ ಮಹಿಳೆಯರೇ ಇದ್ದಾರೆ. ಮ್ಯಾನ್ಮಾರ್‌ನ ಮಾಂಗ್ಡಾವ್ ಎಂಬಲ್ಲಿ ಅತಿ ಹೆಚ್ಚು ಸೋಂಕು ಪೀಡಿತರು ಕಂಡುಬಂದಿದ್ದು, ಎಲ್ಲ ರೋಗಿಗಳಲ್ಲಿ ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಿಮೆ ರೋಗ ಲಕ್ಷಣ ಇರುವವರನ್ನು ಪ್ರತ್ಯೇಕವಾಗಿ ಇಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಬಾಂಗ್ಲಾ ಅಡಿಯಲ್ಲಿ ಅಕ್ರಮ ಪ್ರವೇಶದಿಂದಾಗಿ ಸೋಂಕು ಹರಡುವಿಕೆ ಅಂಕೆಗೆ ಸಿಗದೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.