Advertisement

ನನ್ನ ಮಗ ಸೋನಿಯಾ  ಗಾಂಧಿ ಅಲ್ಲ: ಸಚಿವ ರೇವಣ್ಣ

06:30 AM Oct 13, 2017 | Team Udayavani |

ದಾವಣಗೆರೆ: “ಯಾರೂ ಆಸೆಯಿಲ್ಲದೆ ರಾಜಕೀಯ ಮಾಡಲ್ಲ, ನನ್ನ ಮಗ ಅನೂಪ್‌ ಸಹ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಚುನಾವಣೆ ಮೂಲಕ ಆಯ್ಕೆಯಾಗಿದ್ದಾನೆ. ಮುಂದೆ ಆತನೂ ಸಹ ಅವಕಾಶ ಸಿಕ್ಕರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ’ ಎಂದು ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಹೇಳಿದ್ದಾರೆ.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ನಿಮ್ಮ ಮಗ ಏನಾದರೂ ಈ ಬಾರಿ ಚುನಾವಣೆಗೆ ನಿಲ್ಲುತ್ತಾರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಯಾರೂ ಸಹ ಆಸೆಯಿಲ್ಲದೆ ರಾಜಕಾರಣ ಮಾಡಲ್ಲ. ಆಸೆಯಿಲ್ಲದೆ ರಾಜಕಾರಣ ಮಾಡೋಕೆ ನನ್ನ ಮಗ ಸೋನಿಯಾ ಗಾಂಧಿ ತರಹ ಅಲ್ಲ. ನನ್ನ ಮಗ ಸಹ ಸಕ್ರಿಯ ರಾಜಕೀಯದಲ್ಲಿದ್ದಾನೆ. ಚುನಾವಣೆ ಮೂಲಕ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾನೆ. ಆತನೂ ಸಹ ಚುನಾವಣೆಗೆ ಸ್ಪರ್ಧಿಸುತ್ತಾನೆ. ಆದರೆ, ಅವಕಾಶ ಸಿಗಬೇಕು, ಕ್ಷೇತ್ರ ನಿಗದಿಯಾಗಬೇಕು. ಆಗ ಚುನಾವಣೆಗೆ ನಿಲ್ಲುತ್ತಾನೆ’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next