Advertisement

ನನ್ನ ಆದ್ಯತೆ ಕೋವಿಡ್ ನಿಯಂತ್ರಣ: ಬಿಎಸ್‌ವೈ

12:20 AM May 28, 2021 | Team Udayavani |

ಬೆಂಗಳೂರು: ಕೋವಿಡ್ ಮಧ್ಯೆಯೇ ರಾಜ್ಯದಲ್ಲಿ ನಡೆಯುತ್ತಿರುವ “ಸಿಎಂ ಬದಲಾವಣೆ ಸುದ್ದಿ’ಗಳ ಬಗ್ಗೆ ಗರಂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, “ದಿಲ್ಲಿಗೆ ಹೋದವರಿಗೆ ವರಿಷ್ಠರು ಸರಿಯಾದ ಉತ್ತರವನ್ನೇ ನೀಡಿ ಕಳುಹಿಸಿದ್ದಾರೆ’ ಎಂದಿದ್ದಾರೆ. ಆ ಮೂಲಕ ತಮ್ಮದೇನಿದ್ದರೂ ಕೊರೊನಾ ನಿಯಂತ್ರಣದ  ಕೆಲಸ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ನಾಯಕತ್ವ ಬದಲಾವಣೆಗಾಗಿ ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸುತ್ತಿರುವವರು ಮತ್ತು ದಿಲ್ಲಿಯ ಕೆಲವು ವರಿಷ್ಠರ ವಿರುದ್ಧವೂ ಸಿಎಂ ತಮ್ಮ ಆಪ್ತರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ಪಕ್ಷದಲ್ಲಿ ಇನ್ನೂ ಪ್ರಬಲರು ಎಂಬ ಸಂದೇಶವನ್ನೂ ಆಪ್ತರ ಮೂಲಕವೇ ರವಾನಿಸಿದ್ದಾರೆ.

ಸಿಎಂ ಬದಲಾವಣೆ ಬಗ್ಗೆ ಇದುವರೆಗೆ  ಮೌನವಾಗಿದ್ದ ಸಿಎಂ, ಇದೇ ಮೊದಲ ಬಾರಿಗೆ ಉತ್ತರ ನೀಡಿದ್ದಾರೆ. “ಈಗೇನಿದ್ದರೂ ನನ್ನ ಮುಂದೆ ಇರುವುದು ಕೊರೊನಾ ಪರಿಸ್ಥಿತಿ ನಿರ್ವಹಣೆ. ಜನರ ಹಿತ ಕಾಪಾಡುವುದು ನನ್ನ ಆದ್ಯತೆ. ಯಾರು ಎಲ್ಲಿಗೆ ಹೋಗಿದ್ದರೋ ಅವರಿಗೆ ವರಿಷ್ಠರು ತಕ್ಕ ಉತ್ತರ ಕೊಟ್ಟು ಕಳುಹಿಸಿದ್ದಾರೆ’ ಎಂದು  ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಕುರಿತು ಬಹಿರಂಗ ವಾಗಿ ಚರ್ಚಿಸುವುದಿಲ್ಲ ಎಂದರು.

ಬೆಂಬಲಿಗರ ಬಲ :

ಸಿಎಂ ಬದಲಾವಣೆಗಾಗಿ ಲಾಬಿ ನಡೆಸುತ್ತಿರುವವರ ವಿರುದ್ಧ ಸಿಎಂ ಬೆಂಬಲಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸಚಿವ ಸಿ.ಪಿ. ಯೋಗೇಶ್ವರ್‌ ವಿರುದ್ಧ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಾಗ್ಧಾಳಿ ನಡೆಸಿದ್ದಾರೆ. ಮೆಗಾ ಸಿಟಿ ಯೋಜನೆಯ ವಂಚನೆ ಮತ್ತು ಅವರ ಹಿನ್ನೆಲೆಯ ಬಗ್ಗೆ ವರಿಷ್ಠರ ಗಮನಕ್ಕೆ ತರಲು ಹಾಗೂ ಸಂಪುಟದಿಂದ ಅವರನ್ನು ಕೈ ಬಿಡುವಂತೆ ಒತ್ತಾಯಿಸಿ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ತೇರದಾಳ ಶಾಸಕ ಸಿದ್ದು ಸವದಿ ಕೂಡ ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

ಮೂರು ಪಕ್ಷಗಳ ಸರಕಾರ :

ರಾಜ್ಯದಲ್ಲಿ ಶುದ್ಧ ಬಿಜೆಪಿ ಸರಕಾರವಿಲ್ಲ, ಜೆಡಿಎಸ್‌-ಕಾಂಗ್ರೆಸ್‌ ಮಿಶ್ರಿತ ಬಿಜೆಪಿ ಸರಕಾರ ಇದೆ ಎಂದು ಸಿ.ಪಿ. ಯೋಗೇಶ್ವರ್‌  ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವೈಯಕ್ತಿಕ ವಾಗಿ ನನಗೆ ಕೆಲವು ವಿಷಯಗಳಲ್ಲಿ ನೋವು ಉಂಟಾಗಿದ್ದು, ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ನನ್ನ ಖಾತೆಯಲ್ಲಿ ನನ್ನ ಮಗ ನಿಗೆ ಅಧಿಕಾರ ಚಲಾಯಿಸಲು ಬಿಡುವುದಿಲ್ಲ. ಹಾಗೆಯೇ ಸಿಎಂ ಹೆಸರಿನಲ್ಲಿ ಮತ್ತೂಬ್ಬರು ಅಧಿಕಾರ ಚಲಾಯಿಸುವುದನ್ನು ಸಹಿಸುವುದಿಲ್ಲ ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಅಸಮಾಧಾನ ಪ್ರದರ್ಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next