Advertisement
“ಜಂತಕಲ್ ಮೈನಿಂಗ್ ಪ್ರಕರಣ 150 ಕೋಟಿ ರೂ.ಗಳದು ಎನ್ನುತ್ತಿದ್ದಾರೆ. ಆದರೆ ಆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಸಾಯಿ ವೆಂಕಟೇಶ್ವರ ಮೈನಿಂಗ್ ಪ್ರಕರಣ ಮುಂದಿಟ್ಟುಕೊಂಡು ಸರಕಾರ ನನ್ನನ್ನು ಬ್ಲ್ಯಾಕ್‌ವೆುàಲ್ ಮಾಡುತ್ತಿದೆ. ಅದರಲ್ಲಿ ಎಸ್‌ಐಟಿ ಅಭಿಯೋಜನೆಗೆ ಅನುಮತಿ ಕೇಳಿದೆ ಎನ್ನುತ್ತಿದ್ದಾರೆ. ಅಭಿಯೋಜನೆಗೆ ರಾಜ್ಯಪಾಲರಿಂದ ಅನುಮತಿ ತೆಗೆದುಕೊಂಡು ಬನ್ನಿ ಎಂದು ಕೋರ್ಟ್ ಹೇಳಿದೆಯೇ’ ಎಂದು ಪ್ರಶ್ನಿಸಿದ್ದಾರೆ.
Related Articles
Advertisement
“ನನ್ನ ಮೇಲೆ 150 ಕೋಟಿ ರೂ. ಆಪಾದನೆ ಬಂದಾಗ ಅಶೋಕ್, ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್ ನನ್ನ ಬಳಿಗೆ ಬಂದು ಬಳ್ಳಾರಿಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವು ದನ್ನು ರದ್ದು ಪಡಿಸಿ. ಮತ್ತೆ ಅವರನ್ನು ಅಲ್ಲಿಗೆ ಮರು ನೇಮಕ ಮಾಡಿ. ಆಗ 150 ಕೋಟಿ ರೂ. ಆರೋಪ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದರು. ಆದರೆ ನಾನು ನಥಿಂಗ್ ಡೂಯಿಂಗ್ ಎಂದು ಹೇಳಿ, ಮುಖ್ಯಮಂತ್ರಿಯಾಗಿ ವರ್ಗಾವಣೆ ಮಾಡಿದ್ದೇನೆ, ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದೆ ಎಂದು ಕುಮಾರಸ್ವಾಮಿ ಮೆಲುಕು ಹಾಕಿದರು.
ಈಗ ಗಂಗೇನಹಳ್ಳಿ ಪ್ರಕರಣ (ಗಂಗೇನಹಳ್ಳಿಯ ಮಠದ ಬಡಾವಣೆಯಲ್ಲಿ 1.11 ಎಕರೆ ಡಿನೋಟಿಫಿ ಕೇಷನ್ ಮಾಡಲು 2007ರಲ್ಲಿ ಮುಖ್ಯಮಂತ್ರಿ ಪ್ರಯತ್ನಿಸಿದ್ದರು) ಹಿಡಿದುಕೊಂಡು ಏನಾದರೂ ಮಾಡಿ ಎನ್ನುತ್ತಿದ್ದಾರೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದರು.
ಸಿದ್ದುಗೆ “ಬಂಡೆ’ ಅಪಾಯಯಾರೋ ಒಬ್ಬರು ಸಿದ್ದರಾಮಯ್ಯನವರ ಜತೆ ಬಂಡೆಯಂತೆ ನಿಲ್ಲುವೆ ಎಂದು ಸೋಗು ಹಾಕು ತ್ತಿದ್ದಾರೆ. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವ ರಿಗೆ ಅಪಾಯ. ಆ ಬಂಡೆಯಿಂದಲೇ ಸಿದ್ದರಾಮಯ್ಯ ಅವರಿಗೆ ಈ ಗತಿ ಬಂದಿದೆ ಎಂದು ಎಚ್‌ಡಿಕೆ ಹೇಳಿದರು. ನಮಗೆ ಬೇರೆ ಕೆಲಸ ಇಲ್ಲವೇ?
ದೇವೇಗೌಡರು, ಕುಮಾರಸ್ವಾಮಿ ಹಟ ಹಿಡಿದು ಮೋದಿ, ಅಮಿತ್ ಶಾ ಅವರ ಮೇಲೆ ಒತ್ತಡ ಹೇರಿ ರಾಜ್ಯಪಾಲರಿಂದ ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ಕೊಡಿಸಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಮಗೇನು ಬೇರೆ ಕೆಲಸ ಇಲ್ಲವೇ? ಅವರ ಪಕ್ಷದ ಪಿತೂರಿಗೆ ಸಿದ್ದರಾಮಯ್ಯ ಅವರು ಬಲಿಯಾಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಏನಿದು ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣ?
ಕುಮಾರಸ್ವಾಮಿ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ 2007ರಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅಕ್ರಮವಾಗಿ 550 ಎಕ್ರೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದಾರೆ ಎಂದು ಆಗ ಲೋಕಾಯುಕ್ತರಾಗಿದ್ದ ನ್ಯಾಣ ಸಂತೋಷ್ ಹೆಗ್ಡೆ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ಈ ವರದಿಯ ಆಧಾರದಲ್ಲಿ ವಿಶೇಷ ತನಿಖಾ ದಳ ದೂರು ದಾಖಲಿಸಿತ್ತು. ಈ ಪ್ರಕರಣ ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ವಿವಿಧ ಹಂತದ ಕಾನೂನು ಹೋರಾಟಗಳನ್ನು ಕಂಡಿದೆ. 2023ರ ನವೆಂಬರ್‌ನಲ್ಲಿ ಲೋಕಾಯುಕ್ತ ಪೊಲೀಸರು ಕುಮಾರಸ್ವಾಮಿ ಅವರ ಅಭಿಯೋಜನೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಪ್ರಕರಣದಲ್ಲಿ 2015ರಲ್ಲಿ ಕುಮಾರಸ್ವಾಮಿ ಅವರನ್ನು ವಿಶೇಷ ತನಿಖಾ ದಳ ವಶಕ್ಕೆ ತೆಗೆದುಕೊಂಡಿತ್ತು. ಬಳಿಕ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಕೇಳಿಲ್ಲ. ಅವರು ರಾಜೀನಾಮೆ ಕೊಡುವುದೂ ಇಲ್ಲ, ಅದು ನನಗೆ ಗೊತ್ತಿದೆ. ಕಾನೂನು ಎಂಬುದೊಂದಿದೆ. ಯಾವ ಹಂತದಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗುತ್ತದೆ.
– ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ