ಮೈಸೂರು: ನಾನು ಬರೆದ ಅನೇಕ ಕಾದಂಬರಿಗಳು ಹಿಂದಿ ಭಾಷೆಗೆ ತರ್ಜುಮೆ ಯಾಗಿವೆ. ಲಕ್ಷಾಂತರ ಪ್ರತಿಗಳೂ
ಮಾರಾಟವಾಗಿವೆ. ಆದರೆ, ಲೆಕ್ಕವನ್ನೇ ಕೊಡುತ್ತಿಲ್ಲ, ಹಣವನ್ನೂ ನೀಡುತ್ತಿಲ್ಲ. ಇವರೆಲ್ಲ ದೇಶ, ಹಿಂದು ಸಮಾಜದ ಉದ್ಧಾರ
ಮಾಡುವವರು ಎಂದು ಹಿರಿಯ ಕಾದಂಬರಿಕಾರ ಪ್ರೊ.ಎಸ್.ಎಲ್. ಬೈರಪ್ಪ ಬೇಸರ ವ್ಯಕ್ತಪಡಿಸಿದರು.
Advertisement
ಗೋಸ್ವಾಮಿ ತುಳಸಿದಾಸ ಜಯಂತಿ, ಗೋಸ್ವಾಮಿ ತುಳಸಿದಾಸ ಸಾರಸ್ವತ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನಕಾದಂಬರಿ ಮುದ್ರಿಸಿರುವ ಕನ್ನಡ ಪ್ರಕಾಶ ಕರು ಪ್ರಾಮಾಣಿಕರು. ನಿಯಮಿತವಾಗಿ ನನಗೆ ಹಣ ಕೊಡುತ್ತಾರೆ, ಜತೆಗೆ, ತೆರಿಗೆ
ಪಾವತಿಸುತ್ತಾರೆ.