Advertisement

ನನ್ನ ತಾಯಿ 44 ನೇ ವಯಸ್ಸಿನಲ್ಲಿ ಗಂಡನನ್ನು‌ ಕಳೆದುಕೊಂಡರು…; ಪ್ರಿಯಾಂಕಾ ಗಾಂಧಿ

03:56 PM Jan 16, 2023 | Team Udayavani |

ಬೆಂಗಳೂರು : ತನ್ನ ತಾಯಿ(ಸೋನಿಯಾ ಗಾಂಧಿ) 44 ನೇ ವಯಸ್ಸಿನಲ್ಲಿ ಗಂಡನನ್ನು‌ ಕಳೆದುಕೊಂಡರೂ‌ ದೇಶಕ್ಕಾಗಿ ತ್ಯಾಗ ಮಾಡುತ್ತಿದ್ದಾರೆ‌. ಎಷ್ಟೇ ಕಷ್ಟ ನಷ್ಟ ಆಗಲಿ, ನೀವು ಎದ್ದು ನಿಂತು ಹೋರಾಟ ಮಾಡಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಬೃಹತ್‌ ಮಹಿಳೆಯರ “ನಾ ನಾಯಕಿ” ಸಮಾವೇಶದಲ್ಲಿ ಭಾವನಾತ್ಮಕ ಮಾತುಗಳನ್ನಾಡಿದ ಪ್ರಿಯಾಂಕಾ, ನಿಮ್ಮ ಸ್ವಂತ ಶಕ್ತಿಯಲ್ಲಿ ಎದ್ದು ನಿಲ್ಲಬೇಕು. ನಿಮ್ಮ ಭವಿಷ್ಯವನ್ನು ನೀವು ಮಾತ್ರ ಬದಲಾವಣೆ ಮಾಡಲು‌‌ ಸಾಧ್ಯ. ನಿಮಗೆ ಶಿಕ್ಷಣ, ಉದ್ಯೋಗ ಹಾಗೂ ಮಕ್ಕಳಿಗೆ ಉತ್ತಮ ಭವಿಷ್ಯ ಬೇಕಲ್ಲವೇ ? ಹಾಗಾದರೆ ಬದಲಾವಣೆಯನ್ನು ಯಾರು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.

ಈ ದೇಶದ ಜನಸಂಖ್ಯೆಯಲ್ಲಿ ಶೇ.50 ಮಹಿಳೆಯರು ಇದ್ದಾರೆ. ಎಲ್ಲ ನಗರ ಹಾಗೂ ಹಳ್ಳಿಗಳಲ್ಲಿ ಶಕ್ತಿವಂತರಾಗಿದ್ದೀರಿ, ಆದರೆ ಅದನ್ನು ಅರ್ಥೈಸಿಕೊಳ್ಳಬೇಕಾಗಿದೆ. ರಾಜಕೀಯ ಪಕ್ಷಗಳು ಎಲ್ಲ ಸಮುದಾಯವನ್ನು ಓಲೈಕೆ ಮಾಡುತ್ತಿವೆ. ಆದರೆ ರಾಜಕೀಯ ಪಕ್ಷಗಳು ಮಹಿಳೆಯರ ಬಗ್ಗೆ ಚಿಂತನೆ ಮಾಡುತ್ತಿಲ್ಲ? ರಾಜ್ಯದಲ್ಲಿ ಚುನಾವಣೆ ಎದುರಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳಿಗೆ ಸಂದೇಶ ಕೊಡಬೇಕಿದೆ. ಈಗ ಬಿಜೆಪಿ ಕೊಟ್ಟಿರುವ ಭರವಸೆಗಳನ್ನು ಈಡೇರಿಸಿದೆಯಾ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ 40% ಲಂಚವನ್ನ ಸರ್ಕಾರ ಪಡೆಯುತ್ತಿದೆ. ನಿಜಕ್ಕೂ ಪಿಎಸ್ಐ ಹಗರಣ ನಾಚಿಕೆಗೇಡು. ಈ ಸರ್ಕಾರ ಪೊಲೀಸ್ ಪಡೆಗಳನ್ನೂ ಮಾರಾಟಕ್ಕಿಟ್ಟಿದೆ. ಮೂರು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಲೂಟಿ ಮಾಡಿದ್ದಾರೆ. ಇದು ನಲ್ವತ್ತು ಪರ್ಸೆಂಟ್ ಕಮಿಷನ್ ನಲ್ಲಿ ಲೂಟಿ ಮಾಡಿದ್ದಾರೆ. ಬಿಎಂಪಿಯಲ್ಲಿ ಎಂಟು ಸಾವಿರ ಕೋಟಿ ಖರ್ಚು ಮಾಡಿದರೆ 3200 ಕೋಟಿ ರೂ. ಲಂಚ ಹೊಡೆಯುತ್ತಿದ್ದಾರೆ. ಈ ಸರ್ಕಾರದಲ್ಲಿ ಡಿಎಲ್ ಗೂ ಲಂಚ, ವರ್ಗಾವಣೆಗೂ ಲಂಚ ಕೊಡಬೇಕಿದೆ. ಇಂತಹ ಸರ್ಕಾರದಲ್ಲಿ ನಿಮ್ಮ ಮಕ್ಕಳಿಗೆ ಉದ್ಯೋಗ, ಶಿಕ್ಷಣ ಸಾಧ್ಯವೇ ಎಂದು ಪ್ರಶ್ನಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ಸರ್ಕಾರಿ ಉದ್ಯೋಗಗಳನ್ನೇ ನಾಶ ಮಾಡುತ್ತಿದ್ದಾರೆ. ಮೋದಿ ತಮ್ಮ ಆಪ್ತರಿಗಾಗಿ ಸಾರ್ವಜನಿಕ ವಲಯದ ಉದ್ಯಮಗಳನ್ನ ಖಾಸಗೀಕರಣ ಮಾಡಲಾಗುತ್ತಿದ್ದಾರೆ. ದೇಶದಲ್ಲಿ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಎಂದು ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next