Advertisement

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

02:27 PM Apr 25, 2024 | Team Udayavani |

ರಕ್ತ ಬಸಿದು ಜೀವ ಕೊಡುವಳು, ನೋವ ತಿಂದು ಜನ್ಮ ಕೊಟ್ಟ ವಳು, ಎದೆ ಹಾಲು ಣಿಸಿ ಅಮೃತವ ನೀಡಿದವಳು, ಅಮ್ಮನ ಪಾಕಶಾಲೆ ಪ್ರೀತಿಯ ಮನೆ.

Advertisement

ಅಮ್ಮ ಎಂದರೆ ಏನೋ ಉಲ್ಲಾಸ ಹೊಸ ಹರುಷ. ಅಮ್ಮ ಕಣ್ಣಿಗೆ ಕಾಣದಿದ್ದರೆ ಏನೋ ಕಳೆದುಕೊಂಡ ಅನುಭವ. ಅಮ್ಮ ನೀನಿರು ಜತೆಗೆ ಜಗವ ಗೆಲ್ಲುವೇ? ತಾಯಿಯ ಪ್ರೀತಿ ಪಡೆಯೋಕೆ ಏಳೇಳು ಜನ್ಮದ ಪುಣ್ಯ ಮಾಡಿರಬೇಕು. ತಾಯಿಯ ಕೈ ರುಚಿಗೆ ಸರಿಸಾಟಿ ಇನ್ಯಾವ ರುಚಿ?

ಅಮ್ಮ ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದೆ. ಮಡಿಲಲಿ ಪ್ರೀತಿಯ ಸುಧೆ ಹರಿಸಿ ನಿದ್ರೆಗಳನ್ನು ತ್ಯಾಗ ಮಾಡಿದೆ. ಹೆತ್ತ ಕರುಳ ಬಳ್ಳಿಯ ಪೋಷಿಸಿ ಬೆಳೆಸುವೆ. ಅಂಬೆಗಾಲಿಡುವಾಗ ಜತೆಯಲ್ಲಿ ಜತೆಯಾಗಿ ನಡೆವೇ. ಮಗು ಎಡವಿ ಬಿದ್ದರೆ ಸಾಕು ಅವಳ ಹೃದಯದಲ್ಲಿ ಏನೋ ಒಂದು ತಳಮಳ, ಸಂಕಟ.

ಅಮ್ಮ ಅಮ್ಮ ಎಂದು ತೊದಲು ನುಡಿವಾಗ ಮನಃಸ್ಪೂರ್ತಿಯಾಗಿ ಸಂಭ್ರಮಪಟ್ಟೆ. ಎಷ್ಟೇ ನೋವಿದ್ದರೂ ನಗುತ್ತ ಕರುಳಬಳ್ಳಿಗಾಗಿ ನಿನ್ನ ತನವನ್ನು ಬಿಟ್ಟು ಬದುಕುತ್ತಾ ಹೋದೆ. ನಡೆಯುವುದನ್ನು, ಮಾತನಾಡುವುದನ್ನು ಕಲಿಸಿಕೊಟ್ಟೆ . ಮಗುವ ನೋಡುತ್ತಾ ನಿನ್ನನ್ನೇ ಮರೆತೆ. ಅಗಾಧ ಪ್ರೀತಿಯಲ್ಲಿ ಬೆಳೆಸಿದೆ. ತುಂಟಾಟ ಸಹಿಸುತ್ತಾ ಕೆನ್ನೆಗೆ ಸಿಹಿ ಮುತ್ತನಿಟ್ಟು ಅಪ್ಪಿ ಮುದ್ದಾಡಿದೆ. ನಿನ್ನ ಕರುಳಬಳ್ಳಿಯ ನಿನ್ನ ಜೀವನವನ್ನೇ ಮುಡುಪಾಗಿಟ್ಟ ದೇವತೆಯೂ ನೀನು ಅಮ್ಮ. ನೀನೆಂದರೆ ಹೃದಯಕ್ಕೆ ಬೆಳಕು.

ಕೈ ತುತ್ತು ಕೊಟ್ಟು ಚಂದಿರನ ತೋರಿಸಿ ಬೆಳದಿಂಗಳಲ್ಲಿ ಊಟ ಮಾಡಿಸಿದೆ. ಅಮ್ಮನ ಕೈರುಚಿ ಮರೆಯಲು ಸಾಧ್ಯವೇ? ಬೇಸರವಿದ್ದರೂ ಮನಸ್ಸಿಲ್ಲದಿದ್ದರು ಮಗುವಿನೊಡನೆ ಬೆರೆತು ಮಾತಾಡುತ್ತಾ ಎತ್ತಿ ಮುದ್ದಾಡುತ್ತಿದ್ದ ನಿನ್ನೆಲ್ಲ ಖುಷಿಯನ್ನು ಮಕ್ಕಳಲ್ಲಿ ನೋಡುತ್ತಿದ್ದೆ.

Advertisement

ತಾಯಿಗೆ ಎಲ್ಲವನ್ನೂ ಸಹಿಸುವ ಶಕ್ತಿ ಇದೆ. ತನ್ನ ಮಕ್ಕಳಿಗೆ ಪ್ರೀತಿಯನ್ನು ಧಾರೆ ಎರೆಯುತ್ತಾಳೆ. ಸ್ವಾರ್ಥವಿಲ್ಲದ ಸಹನೆ ಕರುಣೆಯ ಮಮತೆಯ ಮಹಾಮೂರ್ತಿ ಅಮ್ಮ. ಅಮ್ಮ ಬೇಸರದಲ್ಲೊ ಅಸಮಧಾನದಲ್ಲಿ ಒಮ್ಮೊಮ್ಮೆ ಅಡುಗೆ ಮಾಡಿದಾಗ ರುಚಿಕರವಿರುವುದಿಲ್ಲ. ಹಾಗೆಂದು ಅವಳ ಮುಂದೆ ಹೇಳಿದಾಗ ಎಷ್ಟು ಮನಸು ನೊಂದುಕೊಳ್ಳುತ್ತದೆ ಬಡಜೀವ ಅಲ್ವಾ?ತಾಯಿಯು ಅಡುಗೆ ಮಾಡುವಾಗ ಕರ್ತವ್ಯ ಎಂದು ಮಾಡುವುದಿಲ್ಲ. ಪ್ರೀತಿ ಧಾರೆಯೆರೆದು ಬಹು ಕಾಳಜಿಯ ಮಹಾಪೂರ ಹರಿಸಿ ಮಾಡುತ್ತಾಳೆ. ಅದಕ್ಕೆ ಅವಳಿಗೆ ಚೆನ್ನಾಗಿಲ್ಲ ಎಂದರೆ ನೋವಾಗುವುದು. ಅಮ್ಮ ಮಾಡಿದ ಅಡುಗೆ ರುಚಿಕರವಿಲ್ಲದಿದ್ದರೆ ರುಚಿಯಾಗಿದೆ ಎಂದು ಹೇಳಿಬಿಡಿ ಅವಳ ಮುಖದಲ್ಲಿ ಒಂದು ಕಿರುನಗೆ ಎಷ್ಟು ಸಮಾಧಾನ ಅನಿಸುತ್ತೆ ಗೊತ್ತಾ?

ಅಮ್ಮನ ಕೈ ರುಚಿ ಹಿತವೇ. ಏಕೆಂದರೆ ಅಮ್ಮನ ಕೈರುಚಿಯಲ್ಲಿ ಪ್ರೀತಿ, ಮಮತೆ, ಬಾಂಧವ್ಯದ ಸವಿಜೇನು ಇದೆ. ಅಮ್ಮನ ಪ್ರೀತಿ ವರ್ಣಿಸಲು ಪದಗಳೇ ಸಾಲದು.

-ವಾಣಿ

ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next