Advertisement

ನನ್ನ ಹೋಮ್‌ಸ್ಕ್ರೀನ್‌

01:25 PM May 15, 2021 | Team Udayavani |

ನನ್ನ ನೆಚ್ಚಿನ ಆ್ಯಪ್‌

Advertisement

goodreeds app;; ಈ ಆ್ಯಪನ್ನುನಾನು ವಿಪರೀತವಾಗಿ ಉಪಯೋಗಿಸುತ್ತೇನೆ. ನಿತ್ಯವೂ ನಾನು ಓದುವ ಪುಸ್ತಕ, ನನ್ನ ಅನಿಸಿಕೆಗಳನ್ನು ಇಲ್ಲಿ ದಾಖಲಿಸುವೆ. ಬೇರೆಯವರು ಓದಿದ ಪುಸ್ತಕ ಮತ್ತು ಅವರ ಅಭಿಪ್ರಾಯಗಳನ್ನೂ ಗಮನಿಸುತ್ತೇನೆ. ಪುಸ್ತಕ ಪ್ರೇಮಿಗಳಿಗೆ ಇಷ್ಟವಾಗುವ ಅಪರೂಪದ ಆ್ಯಪ್‌ ಇದು.

ಈಚೆಗೆ ನೋಡಿದ ಚಿತ್ರ

ಜೋಜಿ, ಮಲಯಾಳಿ ಸಿನಿಮಾ. ತುಂಬಾ ಇಷ್ಟವಾಯ್ತು. ಅಮೆಜಾನ್‌ ಪ್ರಮ್‌ ನಲ್ಲಿ ಈ ಸಿನಿಮಾ ಇದೆ. ಇಷ್ಟವಾದ ವೆಬ್‌ಸೈಟ್‌ alar.ink;ಇದು ಕನ್ನಡದ ಪದಕೋಶದ ವೆಬ್‌ ಸೈಟ್‌. ಹಳಗನ್ನಡ ವನ್ನು ಓದುವಾಗ, ಹೊಸ ಪದಗಳ ಅರ್ಥ ಕಂಡುಕೊಳ್ಳುವಾಗ ಈ ವೆಬ್‌ ಸೈಟ್‌ ನನಗೆ ತುಂಬಾ ಸಹಾಯ ಮಾಡಿದೆ.

ಈಚೆಗೆ ಓದಿದ ಪುಸ್ತಕ

Advertisement

vinay sitapatiಅವರ  jugalbandi ಇತ್ತೀಚಿಗೆ ನಾನು ಓದಿದ ಇ – ಪುಸ್ತಕ. ಅಟಲ್‌ ಬಿಹಾರಿ ವಾಜಪೇಯಿ ಮತ್ತು ಲಾಲ್‌ ಕೃಷ್ಣ ಅಡ್ವಾಣಿ ಅವರ ಬದುಕನ್ನು ಈ ಪುಸ್ತಕದಲ್ಲಿ ವಸ್ತುನಿಷ್ಠವಾಗಿ ವಿವರಿಸಲಾಗಿದೆ.

ಸಬ್‌ಸಕ್ಕೃಬ್‌ ಮಾಡಿದ ಯುಟ್ಯೂಬ್‌ ಚಾನೆಲ್‌

ytmusic app– ನನಗೆ ಕರ್ನಾಟಕ ಸಂಗೀತ ಕೇಳುವ ಆಸಕ್ತಿ ಇದೆ. ಆದ್ದರಿಂದ ಇದನ್ನು ಬಳಸುತ್ತೇನೆ. ಇದಕ್ಕೆ ಚಂದಾದಾರರಾಗಬೇಕು. ತಿಂಗಳಿಗೆ 99 ರೂಪಾಯಿ. ಇಡೀ ದಿನ ಜಾಹೀರಾತಿನ ಅಡಚಣೆ ಇಲ್ಲದ ನಿರಂತರ ಗಾಯನ ಕೇಳಬಹುದು.

ವಸುಧೇಂದ್ರ, ಕಾದಂಬರಿಕಾರರು

Advertisement

Udayavani is now on Telegram. Click here to join our channel and stay updated with the latest news.

Next