Advertisement

ಸಿದ್ಧಾರೂಢರ ಸೇವೆ ಅವಕಾಶ ನನ್ನ ಅದೃಷ್ಟ

04:41 PM May 24, 2017 | |

ಹುಬ್ಬಳ್ಳಿ: ಆರೂಢ ಪರಂಪರೆಯ ಅಧಿನಾಯಕ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ ಹಾಗೂ ಶ್ರೀ ಗುರುನಾಥರೂಢ ಸ್ವಾಮೀಜಿ ಅವರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ವಿ.ಶ್ರೀಶಾನಂದ ಹೇಳಿದರು.

Advertisement

ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಮಂಗಳವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ಬಳಿ ಲಕ್ಷ, ಕೋಟಿ ಹಣ ಇದ್ದರು ಅದು ವ್ಯರ್ಥ. ಸದ್ಗುರುವಿನ ಮುಂದೆ ಎಲ್ಲವೂ ನಶ್ವರ. ಸದ್ಗುರುಗಳ ಆಶೀರ್ವಾದ ಹಾಗೂ ಅವರ ಸೇವೆಯಿಂದ ನಾವೆಲ್ಲರೂ ಪುನೀತರಾದಂತೆ.

ಕಳೆದ ಒಂದೂವರೆ ವರ್ಷದಿಂದ ಶ್ರೀಮಠದ ಆಡಳಿತಾಧಿಕಾರಿಯಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಸೇವೆ ಮಾಡಲಾಗಿದ್ದು ಎಲ್ಲವು ಶ್ರೀಗಳ ಪಾದಕ್ಕೆ ಸಮರ್ಪಣೆ ಎಂದರು. ಕಳೆದ 2-3 ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು, ಅಜ್ಜನ ಜಾತ್ರೆ ಹೇಗೆ ಮಾಡುವುದು ಎಂದು ಎಲ್ಲರೂ ಚಿಂತಿತರಾಗಿದ್ದರು. ಭಕ್ತರು ಅಜ್ಜನ ಜಾತ್ರೆಗೆ ಯಾವುದೇ ತೊಂದರೆಯಾಗದಂತೆ ನೆರವೇರಿಸಿರುವುದು ಮರೆಯಲಾಗದು.

ಅಂತಹ ಲಕ್ಷಾಂತರ ಭಕ್ತರನ್ನು ಹೊಂದಿರುವ ಶ್ರೀಮಠ ಹುಬ್ಬಳ್ಳಿ ಕಾಶಿ ಎಂದರೆ ತಪ್ಪಾಗಲಾರದು ಎಂದರು. ಶ್ರೀಮಠದ ಅಭಿವೃದ್ಧಿಗೆ ಕೆಲವೊಂದು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು. ಅದರಿಂದ ಶ್ರೀಮಠದ ಅಭಿವೃದ್ಧಿ ಸಾಧ್ಯವಾಯಿತು. ಇದರಿಂದ ಭಕ್ತರಿಗೆ ಏನಾದರೂ ತೊಂದರೆಯಾಗಿದ್ದರೇ ಮನ್ನಿಸಿ ಎಂದರು. 

ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ವಿ.ಶ್ರೀಶಾನಂದ ಅವರು ನಮ್ಮೆಲ್ಲರ ಹಿರಿಯಣ್ಣನಂತೆ ಅವರ ಅನುಭವಗಳನ್ನು ನಮಗೆಲ್ಲ ದಾರಿ ಎರೆದಿದ್ದಾರೆ. ಅಂಥವರೊಂದಿಗೆ ಕೆಲಸ ಮಾಡಿದ ನಮಗೆ ಹೆಚ್ಚಿನ ಸಂತಸವಾಗಿದೆ. 

Advertisement

ನ್ಯಾಯಾದಾನ, ಆಡಳಿತ, ಆಧಾತಿಕ,  ಜೀವನ, ಸಮಾಜ ಸೇರಿದಂತೆ ಎಲ್ಲದರಲ್ಲೂ ಕ್ತ ಮಾರ್ಗದರ್ಶನ ನೀಡಿದ ಅವರಿಗೆ ಅಭಿನಂದನೆಗಳು ಎಂದರು. ಶ್ರೀ ಶಾಂತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಮಠದ ಟ್ರಸ್ಟ್‌ ಚೇರನ್‌ ಧರಣೇಂದ್ರ ಜವಳಿ ಅಧ್ಯಕ್ಷತೆ ವಹಿಸಿದ್ದರು. 

ಶ್ರೀಮಠದ ಟ್ರಸ್ಟ್‌ ಕಮೀಟಿಯಿಂದ ಶ್ರೀಶಾನಂದ ಹಾಗೂ ಪತ್ನಿ ರಜನಿ ಶ್ರೀಶಾನಂದ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ, ತಹಶೀಲ್ದಾರ ಶಶಿಧರ ಮಾಡ್ಯಾಳ ಹಾಗೂ ಮೊದಲಾದವರು ಸನ್ಮಾನಿಸಿದರು. 

ಟ್ರಸ್ಟ್‌ ಕಮಿಟಿ ಗೌರವ ಕಾರ್ಯದರ್ಶಿ ಗೀತಾ ಎಸ್‌.ಜಿ., ಧರ್ಮದರ್ಶಿಗಳಾದ ನಾರಾಯಣಪ್ರಸಾದ ಪಾಠಕ, ಬಸವರಾಜ  ಕಲ್ಯಾಣ ಶೆಟ್ಟರ, ಮಹೇಂದ್ರ ಸಿಂ , ಶಿವರುದ್ರಪ್ಪ ಉಕ್ಕಲಿ, ಯಲ್ಲಪ್ಪ ದೊಡ್ಡಮನಿ, ಎನ್‌.ಟಿ. ಮೆಹರವಾಡೆ, ಕರಬಸಪ್ಪ ಮಾಕನೂರ, ಶಾಮಾನಂದ ಪೂಜೇರಿ, ಬಿ.ವಿ. ಸೋಮಾಪುರ, ಪರ್ವತಗೌಡ ಪಾಟೀಲ, ನಾರಾಯಣ ನಿರಂಜನ, ಆನಂದಕುಮಾರ ಮಗದುಮ್‌, ಕೆ.ಎಲ್‌. ಪಾಟೀಲ, ಗವಿಸಿದ್ದಯ್ಯ ಅಮೋ ಮಠ ಇದ್ದರು. ಜ್ಯೋತಿ ಸಾಲಿಮಠ ಸ್ವಾಗತಿಸಿದರು. ಎಸ್‌.ಐ.ಕೋಳಕೊರ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next